ಮದ್ದೂರು ಕಲ್ಲು ತೂರಾಟ ಕೇಸ್ – ಸತ್ಯಾಸತ್ಯತೆ ಅರಿಯಲು ಸತ್ಯಶೋಧನಾ ತಂಡ ರಚಿಸಿದ ರಾಜ್ಯ ಬಿಜೆಪಿ!

ಬೆಂಗಳೂರು : ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ಪ್ರಕರಣ ಮದ್ದೂರು ಪಟ್ಟಣದಲ್ಲಿ ಶಾಂತಿ ಕದಡಿದೆ. ಮದ್ದೂರಿನ ಸ್ಥಿತಿ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಸೆ.8ರಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಇಂದು ಕೂಡ ಪ್ರತಿಭಟನಾ ಜಾಥಾ ನಡೆಯುತ್ತಿರುವ ಹಿನ್ನೆಲೆ ಮದ್ದೂರು ಬಂದ್​ಗೆ ಕರೆ ನೀಡಲಾಗಿದೆ. ಹಿಂದೂಪರ ಸಂಘಟನೆಗಳ ಕರೆಗೆ ರಾಜ್ಯ ಬಿಜೆಪಿಯೂ ಸಾಥ್ ನೀಡಿದೆ.

ಇದೀಗ ಈ ಘಟನೆಯ ಸತ್ಯಾಸತ್ಯತೆ ತಿಳಿಯಲು ರಾಜ್ಯ ಬಿಜೆಪಿ ವತಿಯಿಂದ ಸತ್ಯಶೋಧನಾ ತಂಡವನ್ನು ರಚಿಸಲಾಗಿದೆ. ಈ ಸಮಿತಿಯ ಪ್ರಮುಖರು ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲಿಸಿ, ಸಮಗ್ರ ವರದಿಯನ್ನು ಒಂದು ವಾರದೊಳಗೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಿರ್ದೇಶಿದ್ದಾರೆ.

ಸತ್ಯಶೋಧನಾ ತಂಡದ ಸಮಿತಿ ಸದಸ್ಯರು : ಮುಖ್ಯ ವಕ್ತಾರ ಅಶ್ವಥ್ ನಾರಾಯಣ್, ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಮಂಜುಳಾ, ನಿವೃತ್ತ IPS ಅಧಿಕಾರಿ ಭಾಸ್ಕರ್ ರಾವ್, ವಕ್ತಾರ ವೆಂಕಟೇಶ್ ದೊಡ್ಡೇರಿ ಹಾಗೂ ಬಿಜೆಪಿ ಮುಖಂಡ ವಿಜಯಪ್ರಸಾದ್.

ಮುಖ್ಯ ವಕ್ತಾರ ಅಶ್ವಥ್ ನಾರಾಯಣ್
ಮುಖ್ಯ ವಕ್ತಾರ ಅಶ್ವಥ್ ನಾರಾಯಣ್
ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಮಂಜುಳಾ
ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷೆ ಮಂಜುಳಾ
ನಿವೃತ್ತ IPS ಅಧಿಕಾರಿ ಭಾಸ್ಕರ್ ರಾವ್
ನಿವೃತ್ತ IPS ಅಧಿಕಾರಿ ಭಾಸ್ಕರ್ ರಾವ್
ವಕ್ತಾರ ವೆಂಕಟೇಶ್ ದೊಡ್ಡೇರಿ
ವಕ್ತಾರ ವೆಂಕಟೇಶ್ ದೊಡ್ಡೇರಿ

ಇದನ್ನೂ ಓದಿ : ‘ದಯಮಾಡಿ ನಂಗೆ ವಿಷ ಕೊಡಿ’.. ಜೈಲಿನ ನರಕಯಾತನೆ ತಾಳಲಾರದೆ ಜಡ್ಜ್​ ಎದುರು ನಟ ದರ್ಶನ್​ ಮನವಿ!

Btv Kannada
Author: Btv Kannada

Read More