ಸಿಗರೇಟ್​ಗೆ ದುಡ್ಡು ಕೇಳಿದ್ದಕ್ಕೆ ಬೇಕರಿಯಲ್ಲಿ ಪುಡಿರೌಡಿಗಳ ಅಟ್ಟಹಾಸ – ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನ.. ಮೂವರು ವಶಕ್ಕೆ!

ಬೆಂಗಳೂರು : ಸಿಗರೇಟ್​ಗೆ ದುಡ್ಡು ಕೇಳಿದ್ದಕ್ಕೆ ಪುಡಿರೌಡಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಬೇಕರಿಯ ಗ್ಲಾಸ್ ಪುಡಿ ಪುಡಿ ಮಾಡಿದ ದಾಂಧಲೆ ನಡೆಸಿದ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜನಾಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಘಟನೆ ಸಂಬಂದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಚ್ಚು-ಲಾಂಗು ಹಿಡದು 3 ಆಟೋದಲ್ಲಿ ಬಂದ 15 ಪುಡಿರೌಡಿಗಳು ದಾಂಧಲೆ ನಡೆಸಿದ್ದಾರೆ.  ಮೊದಲು ಮೂವರು ಪುಡಿರೌಡಿಗಳು ಅಂಜನಾಪುರದ ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್​​ಗೆ 9.15ರ ಸುಮಾರಿಗೆ ಬೇಕರಿಗೆ ಬಂದು ಸಿಗರೇಟ್ ತೆಗೆದುಕೊಂಡಿದ್ರು, ಮಾಲೀಕ ಹಣ ಕೇಳಿದಾಗ ಪುಂಡಾಟ ನಡೆಸಿದ್ದರು.

ಬಳಿಕ ಅವಾಜ್ ಹಾಕಿ ಅಲ್ಲಿಂದ ತೆರಳಿದ್ದ ಪುಂಡರು, 15 ನಿಮಿಷ ಬಿಟ್ಟು ಮತ್ತೆ ಮೂರು ಆಟೋದಲ್ಲಿ ವಾಪಸ್​ ಬಂದು ಮಚ್ಚು-ಲಾಂಗ್ ಹಿಡಿದು‌ ದಾಂಧಲೆ ನಡೆಸಿದ್ದಾರೆ.  ಬೇಕರಿಯಲ್ಲಿದ್ದ ಗಾಜಿನ ಭರಣಿ ಒಡೆದು ಹಾಕಿ ಅಟ್ಟಹಾಸ ಮೆರೆದಿದ್ದಾರೆ. ಬೇಕರಿ‌ ಮಾಲೀಕನ ತಮ್ಮನ ಕಣ್ಣಿಗೆ ಖಾರದ ಪುಡಿ ಹಾಕಿ ಮಚ್ಚು-ಲಾಂಗ್​ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬರ್ತಿದ್ದಂತೆ ಕೆಲ ಪುಡಿರೌಡಿಗಳು ಪರಾರಿಯಾಗಿದ್ದಾರೆ. ಸದ್ಯ ಅಟ್ಟಹಾಸ ಮೆರೆದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್​ – ಇಂದು ಕೋರ್ಟ್​ನಲ್ಲಿ ಚಾರ್ಜ್ ಫ್ರೇಮ್.. ಟ್ರಯಲ್ ಆರಂಭಕ್ಕೆ ದಿನಾಂಕ ನಿಗದಿ ಸಾಧ್ಯತೆ!

Btv Kannada
Author: Btv Kannada

Read More