ಸಿ.ಪಿ ಯೋಗೇಶ್ವರ್ ಪುತ್ರ ಸ್ಯಾಂಡಲ್​ವುಡ್​ಗೆ ಎಂಟ್ರಿ – ಬರ್ತಿದೆ ‘ಸೈನಿಕ-2’ ಸಿನಿಮಾ!

ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ಎಂದೂ ಮರೆಯಲಾಗದ ವೀರ ಯೋಧನ ಸಿನಿಮಾ ಅಂದರೆ ಅದು ಸಿ ಪಿ ಯೋಗೇಶ್ವರ್ ನಟನೆಯ ‘ಸೈನಿಕ’. ಈ ಸಿನಿಮಾ 2002ರಲ್ಲಿ ತೆರೆಕಂಡಿದ್ದು, ಇದೀಗ ಸುಮಾರು ಎರಡು ದಶಕಗಳ ನಂತರ ಸೈನಿಕ ಸೀಕ್ವೆಲ್ ಸಿನಿಮಾ ಬರೋದು ಫಿಕ್ಸ್ ಆಗಿದೆ.

ಹೌದು.. ಸಿ ಪಿ ಯೋಗೇಶ್ವರ್ ಅವರು ಈಗ ಮಗ ಧ್ಯಾನ್ ಯೋಗೇಶ್ವರ್‌‌ನ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಲಾಂಚ್ ಮಾಡಲು ಸಜ್ಜಾಗಿದ್ದಾರೆ. 2016ರಲ್ಲಿ ಸಿಪಿ ಯೋಗೇಶ್ವರ್ ಸೈನಿಕ-2 ಸಿನಿಮಾ ಮಾಡೋಕೆ ತಯಾರಿ ನಡೆಸಿದ್ದರು. ಆದರೆ ಯಾವುದೋ ಕಾರಣಾಂತರಗಳಿಂದ ಆಗಿರಲಿಲ್ಲ. ಇದೀಗ ತಮ್ಮ ಬಹುದಿನದ ಕನಸನ್ನು ಮಗನ ಮೂಲಕ ನನಸು ಮಾಡಿಕೊಳ್ಳುವ ಮನಸ್ಸು ಮಾಡಿದ್ದಾರೆ.

ಸಿಪಿವೈ ಎರಡನೇ ಪತ್ನಿ ಮಗ ಧ್ಯಾನ್ ಸಖತ್ ಹ್ಯಾಂಡ್ಸಮ್ ಆಗಿದ್ದು, ಹೈಟು, ವೆಯ್ಟು, ಕಲರ್, ಖದರ್ ಎಲ್ಲಾ ಆ್ಯಂಗಲ್‌‌‌ನಿಂದ ಹೀರೋ ಮೆಟೀರಿಯಲ್. ಸಖತ್ ಫಿಟ್ನೆಸ್ ಫ್ರೀಕ್ ಆಗಿರೋ ಧ್ಯಾನ್, ಕುದುರೆ ಸವಾರಿ, ಮಾರ್ಷಲ್ ಆರ್ಟ್ಸ್, ಡ್ಯಾನ್ಸ್ ಎಲ್ಲವೂ ಸಿನಿಮಾಗಾಗಿ ಬಹಳ ವರ್ಷಗಳಿಂದಲೇ ಕಲಿಯುತ್ತಿದ್ದಾರಂತೆ. ಅಲ್ಲದೆ, ಆಗಾಗ ಕೃಷಿಕನಂತೆ ಗದ್ದೆಗೂ ಇಳಿದು ರೈತನ ಕಷ್ಟ ಸುಖಗಳನ್ನ ಹತ್ತಿರದಿಂದ ನೋಡಿದ್ದಾರೆ.

ಸೈನಿಕ-2 ಸಿನಿಮಾದಲ್ಲಿ ಈ ಹಿಂದೆ ಅಪ್ಪ ಸೋಲ್ಜರ್ ಆಗಿ ಮಿಂಚಿದಂತೆ ತಾನೂ ಸಾಲಿಡ್ ಸೋಲ್ಜರ್ ಆಗಿ ದೇಶಪ್ರೇಮದ ಕಿಚ್ಚ ಹಚ್ಚಲಿದ್ದಾರೆ. ಪ್ರೇಮಕಥೆಯ ಜೊತೆಗೆ ನೈಜ ಘಟನೆಗಳನ್ನ ಆಧರಿಸಿದ ಸೈನಿಕರೊಬ್ಬರ ಕಥೆಯನ್ನ ಸಿನಿಮಾ ಮಾಡೋಕೆ ಮುಂದಾಗಿರೋ ಸಿಪಿವೈ ಮಗನ ಮೂಲಕ ಮತ್ತೆ ಸೈನಿಕನನ್ನ ಪ್ರೇಕ್ಷಕರ ಮುಂದೆ ತರಲಿದ್ದಾರೆ.

ಧ್ಯಾನ್ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡ್ತಿದ್ದು, ಪದವಿ ಪಡೆದು ಹೀರೋ ಆಗಲಿದ್ದಾರಂತೆ. ಧ್ಯಾನ್ ಸಿನಿಮಾ ರಂಗದಲ್ಲಿ ಹೀರೋ ಆಗಿ ನೆಲೆ ನಿಲ್ಲುವ ಭರವಸೆಯಿದ್ದು, ಸದ್ಯದಲ್ಲೇ ಸೈನಿಕ-2 ಅಪ್ಡೇಟ್ಸ್ ಜೊತೆ ತಂದೆಯ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : iPhone ಪ್ರಿಯರಿಗೆ ಗುಡ್​ನ್ಯೂಸ್.. ನಾಳೆಯೇ ಐಫೋನ್‌ 17 ಬಿಡುಗಡೆ – ಬೆಲೆ ಎಷ್ಟು?

Btv Kannada
Author: Btv Kannada

Read More