ಬೆಂಗಳೂರು : ಯುವಕನೋರ್ವ ತನ್ನ ಲವ್ವರ್ ಜೊತೆ ಫೋನ್ನಲ್ಲಿ ಮಾತಾಡಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಹದೇವಪುರದ ದೊಡ್ಡನೆಕ್ಕುಂದಿ ಬಳಿ ನಡೆದಿದೆ. ವಿಜಯಪುರ ಮೂಲದ ಇಸ್ಮಾಯಿಲ್ (26) ಕೊಲೆಯಾದ ಯುವಕ.

ಪುನೀತ್ ಹಾಗೂ ಪ್ರತಾಪ್ ಎಂಬುವವರು ಸ್ನೇಹಿತ ಇಸ್ಮಾಯಿಲ್ನನ್ನು ರೈಲಿಗೆ ನೂಕಿ ಕೊಲೆ ಮಾಡಿದ್ದಾರೆ. ಪುನೀತ ಹಾಗೂ ಪ್ರತಾಪ ಇಬ್ಬರು ಒಟ್ಟಿಗೆ ಒಂದೇ ಮನೆಯಲಿದ್ದರು. ಇಸ್ಮಾಯಿಲ್ನನ್ನು ಪುನೀತ್ ವಿಜಯಪುರದಿಂದ ಬೆಂಗಳೂರಿಗೆ ಕರೆ ತಂದಿದ್ದ. ಆಟೋ ಓಡಿಸಿಕೊಂಡು ಜೀವನ ಸಾಗಿಸ್ತಿದ್ದ ಇಸ್ಮಾಯಿಲ್, ಪುನೀತ್ ಗೆಳತಿ ಜೊತೆ ಇಸ್ಮಾಯಿಲ್ ಪದೇ ಪದೇ ಫೋನಿನಲ್ಲಿ ಮಾತಾಡ್ತಿದ್ದ.

ಇದೇ ವಿಚಾರಕ್ಕೆ ರೈಲ್ವೇ ಟ್ರ್ಯಾಕ್ ಬಳಿ ಪಾರ್ಟಿ ಮಾಡ್ತಿದ್ದಾಗ ಸ್ನೇಹಿತರ ಜಗಳ ನಡೆದಿದ್ದು, ನಂತರ ಆರೋಪಿಗಳು ಸ್ನೇಹಿತ ಇಸ್ಮಾಯಿಲ್ ಕೊಂದು ಮೃತದೇಹವನ್ನು ಟ್ರ್ಯಾಕ್ಗೆ ಎಸೆದಿದ್ದಾರೆ. ಸದ್ಯ ಬೈಯಪ್ಪನಹಳ್ಳಿ ರೈಲ್ವೇ ಪೊಲೀಸರು ಪುನೀತ್, ಪ್ರತಾಪ್ ಅನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಯಜಮಾನ-ರಾಮಾಚಾರಿ ಮಹಾಸಂಗಮ : ಝಾನ್ಸಿ-ರಾಘು ಪ್ರೀತಿ ಗೆಲ್ಲಿಸೋಕೆ ಬರಲಿದ್ದಾರೆ ರಾಮಾಚಾರಿ-ಚಾರು!







