ಬೆಂಗಳೂರಿನಲ್ಲಿ ಕಾರ್ ಡ್ರೈವರ್​ನ ಬರ್ಬರ ಹತ್ಯೆ.. ಬಿಯರ್ ಬಾಟಲ್, ಕಲ್ಲಿನಿಂದ ಹೊಡೆದು ಕೊಲೆ!

ಬೆಂಗಳೂರು : ಬಿಯರ್ ಬಾಟಲ್, ಕಲ್ಲಿನಿಂದ ಹೊಡೆದು ಕಾರ್ ಡ್ರೈವರ್‌ನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ನಡೆದಿದೆ. 25 ವರ್ಷದ ಕೌಶಿಕ್ ಕೊಲೆಯಾದ ಕಾರು ಚಾಲಕ.

ಮೃತ ಕೌಶಿಕ್ ಬ್ಯಾಟರಾಯನಪುರದಲ್ಲಿ ರೌಡಿಶೀಟರ್ ಆಗಿದ್ದ. 2020ರಲ್ಲಿ ಕೊಲೆ ಕೇಸ್ ಒಂದರಲ್ಲಿ ಕೌಶಿಕ್ ಎ8 ಆರೋಪಿಯಾಗಿ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೂಲಕ ಹೊರಬಂದು, ಕ್ಯಾಬ್ ಓಡಿಸಿಕೊಂಡು ಜೀವನ ಸಾಗಿಸ್ತಿದ್ದ.

ಭಾನುವಾರ ರಾತ್ರಿ ಕೌಶಿಕ್, ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವೇಳೆ ಜಗಳ ನಡೆದಿದೆ. ಬಳಿಕ ಜೊತೆಯಲ್ಲಿದ್ದ ಸ್ನೇಹಿತರೇ ಕೌಶಿಕ್‌ನನ್ನು ಹತ್ಯೆಗೈದಿದ್ದಾರೆ ಎನ್ನಲಾಗುತ್ತಿದೆ. ಮಧ್ಯರಾತ್ರಿ 2:30ರ ಸುಮಾರಿಗೆ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮದ್ದೂರಿನಲ್ಲಿ ಗಲಾಟೆ ಮಾಡಿದವರನ್ನು ಅರೆಸ್ಟ್ ಮಾಡಿದ್ದೇವೆ – ಡಾ.ಜಿ ಪರಮೇಶ್ವರ್!

 

Btv Kannada
Author: Btv Kannada

Read More