ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾಗೋಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಬಿಗ್‌ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28ರಿಂದ ಶುರುವಾಗಲಿದೆ ಎಂದು ಕಲರ್ಸ್ ಕನ್ನಡ ಈಗಾಗಲೇ ದೃಢಪಡಿಸಿದೆ. ಕಿಚ್ಚ ಸುದೀಪ್ ಅವರೇ ಈ ಬಾರಿಯೂ ನಿರೂಪಣೆ ಮಾಡಲಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಯಾವೆಲ್ಲಾ ಕಂಟೆಸ್ಟೆಂಟ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಬಹುದು ಎಂಬ ಪ್ರಶ್ನೆ ಮಾತ್ರ ಎಲ್ಲರಲ್ಲಿಯೂ ಇನ್ನೂ ಹಾಗೇ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ. ಈ ನಡುವೆ ಈ ಬಾರಿ ಬಿಗ್ ಬಾಸ್‌ಗೆ ಜನಸಾಮಾನ್ಯರಿಗೂ ಎಂಟ್ರಿಯಿದೆ ಎಂದು ಕಲರ್ಸ್‌ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
ಹೌದು, ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಜೊತೆಗೆ ಜನಸಾಮಾನ್ಯರಿಗೂ ಎಂಟ್ರಿ ಇದೆ. ಇದರ ಬಗ್ಗೆ ಸ್ವತಃ ಕಲರ್ಸ್ ಕನ್ನಡ ಹೊಸ ಪ್ರೋಮೋವನ್ನು ಹಂಚಿಕೊಳ್ಳುವ ಮೂಲಕ ಅಧಿಕೃತಗೊಳಿಸಿದೆ. ಆದರೆ ಜನಸಾಮಾನ್ಯರು ಸ್ಪರ್ಧಿಯಾಗಲ್ಲ. ಬದಲಿಗೆ ಬಿಗ್ ಬಾಸ್ ಮನಗೆ ಅತಿಥಿಯಾಗಿ ಎಂಟ್ರಿ ನೀಡಬಹುದು. ಇದಕ್ಕಾಗಿ ನೀವು ಇಷ್ಟು ಮಾಡಿದ್ರೆ ಸಾಕಂತೆ. ಹಾಗಿದ್ರೆ ಪ್ರೋಮೋದಲ್ಲಿ ಏನಿದೆ ಎಂದು ನೋಡುವುದಾದರೆ, ಆರಂಭದಲ್ಲಿಯೇ ಕಿಚ್ಚ ಸುದೀಪ್ ʼನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಬಿಗ್ ಬಾಸ್ ಮನೆಗೆ ಸ್ವಾಗತ ಎಂದು ಹೇಳಿದ್ದಾರೆ. ಇದು ಕನ್ನಡಿಗರಿಗೆ ಇರುವ ಅತಿ ದೊಡ್ಡ ಅವಕಾಶವಾಗಿದೆ ಎಂದು ತಿಳಿಸಿದೆ.

ಬಿಗ್ ಬಾಸ್ ಮನೆಗೆ ಹೋಗಲು ಜಸ್ಟ್ ಇಷ್ಟು ಮಾಡಿ : ನೀವೂ ಸಹ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಬೇಕಾದರೆ, ಸೋಮವಾರದಿಂದ ಶುಕ್ರವಾರ ಸಂಜೆ 6ರಿಂದ ರಾತ್ರಿ 1:30ರ ತನಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೀರಯಲ್ಗಳನ್ನು ನೋಡಿ ಪ್ರತಿ ಸೀರಿಯಲ್‌ನಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಸಹ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸರಿಯಾದ ಉತ್ತರಿಸಿದರೆ ಲಕ್ಕಿ ವಿನ್ನರ್ಸ್‌ಗೆ ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಹೋಗುವ ಅವಕಾಶ ಇರಲಿದೆ. ಸಂಜೆ 6ರಿಂದ 10:30ರ ವರೆಗ ಪ್ರಸಾರವಾಗುವ ದೃಷ್ಟಿ ಬೊಟ್ಟು, ಪ್ರೇಮಕಾವ್ಯ, ಭಾಗ್ಯಲಕ್ಷ್ಮೀ, ಮುದ್ದು ಸೊಸೆ, ನಿನಗಾಗಿ, ಭಾರ್ಗವಿ, ನಂದಗೋಕುಲ, ಯಜಮಾನ ಮತ್ತು ರಾಮಾಚಾರಿ ಧಾರಾವಾಹಿಗಳನ್ನು ನೋಡಿ ಅದರಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಬಿಗ್ ಬಾಸ್ ಮನೆಗೆ ನೀವೂ ಹೋಗಬಹುದು.
ಇದನ್ನೂ ಓದಿ : ಇನ್ಮುಂದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ರೆ ಮಾತ್ರ ಗ್ಯಾರಂಟಿ ಭಾಗ್ಯ?







