ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್ ಚಂದನ್ ಗೌಡ ಹಣ ಪಡೆದ ಗಂಭೀರ ಆರೋಪ – ಇದು ಯೂಟ್ಯೂಬರ್ಸ್​ಗಳ ‘ಧರ್ಮ’ದ ಹಣದ ಕಚ್ಚಾಟ!

ಬೆಂಗಳೂರು : ಯೂಟ್ಯೂಬರ್ ಚಂದನ್ ಗೌಡ ವಿರುದ್ಧ ಧರ್ಮಸ್ಥಳ ಪ್ರಕರಣದಲ್ಲಿ ಹಣ ಪಡೆದ ಗಂಭೀರ ಆರೋಪ ಕೇಳಿಬಂದಿದೆ. ಚಂದನ್ ಗೌಡ ಮೇಲೆ ಮತ್ತೊಬ್ಬ ಯೂಟ್ಯೂಬರ್ ಸುಮಂತ್ ಗೌಡ ಎಂಬಾತ ಈ ಆಪಾದನೆ ಮಾಡಿದ್ದಾರೆ.

ಚಂದನ್ ಗೌಡ ಈ ಹಿಂದೆ ಕೆ.ಆರ್ ಪೇಟೆ ಕ್ಷೇತ್ರದ MLA ಅಭ್ಯರ್ಥಿಯಾಗಿದ್ದ. ಎಲೆಕ್ಷನ್ ಟೈಂನಲ್ಲಿ ಹಣವಿಲ್ಲದೇ ಪರದಾಡಿದ್ದ. ಕತ್ತಲ್ಲಿದ್ದ ಚಿನ್ನದ ಚೈನ್ ಅಡವಿಟ್ಟು ಚಂದನ್ ಗೌಡ ಎಲೆಕ್ಷನ್​​ಗೆ ಸ್ಪರ್ಧೆ ಮಾಡಿದ್ದ. ಆದ್ರೆ, ಎಲೆಕ್ಷನ್ ಆಗಿ 2 ವರ್ಷ ಕಳೆದಿಲ್ಲ ಇದೀಗ ಲಕ್ಷ ಲಕ್ಷ ಹಣ ಎಲ್ಲಿಂದ ಬಂತು? ಚಂದನ್ ಗೌಡ 50 ಲಕ್ಷ ಮೌಲ್ಯದ ಬಟ್ಟೆ ಅಂಗಡಿ ಇಟ್ಟಿದ್ದಾನೆ. ಸ್ವಂತ ಕಾರಿನ ಲೋನ್​​ ಕಟ್ಟೋಕ್ಕಾಗದ ಚಂದನ್ ಅದೇಗೆ ಬಟ್ಟೆ ಅಂಗಡಿ ಇಟ್ಟ? ಇದರ ಹಿಂದೆ ಧರ್ಮಸ್ಥಳದಿಂದ ಬಂದಿರೋ ಫಂಡ್​ ಕಾರಣ ಎಂದು ಯೂಟ್ಯೂಬರ್ ಸುಮಂತ್ ಆರೋಪಿಸಿದ್ದಾರೆ.

ಹಣ ಇಲ್ಲದೇ ಪರದಾಡ್ತಿದ್ದ ಚಂದನ್ ಗೌಡಗೆ ಒಮ್ಮೆಲೆ ಹಣ ಬಂದಿದ್ದು ಹೇಗೆ ? ಚಂದನ್ ಗೌಡ 50 ಲಕ್ಷ ಮೌಲ್ಯದ ಬಟ್ಟೆ ಅಂಗಡಿ ಇಟ್ಟಿದ್ದಾನೆ ಇದು ಹೇಗೆ ಸಾಧ್ಯ? ಎಂಬುವುದರ ಬಗ್ಗೆ ಸ್ವತಃ ಸುಮಂತ್ ಮದ್ದೂರು ಕೆಲ ದಿನಗಳ ಹಿಂದೆ ಹೇಳಿದ್ದರು. ಈ ಸುದ್ದಿ ಹರಿದಾಡ್ತಿದ್ದಂತೆ ಇದೀಗ ಸುಮಂತ್​​ಗೆ ಚಂದನ್ ಗೌಡ ಬಿಗ್ ಸವಾಲ್ ಹಾಕಿದ್ದು, ತಾನು ಯಾರಿಂದಲೂ ಹಣವನ್ನು ಪಡೆದಿಲ್ಲ ಎಂದು ಚಂದನ್ ಗೌಡ ಹೇಳಿದ್ದಾರೆ.

ಸುಮಂತ್ ಎಂಬಾತ ಬಾಯಿಗೆ ಬಂದಹಾಗೆ ನನ್ನ ಬಗ್ಗೆ ನಾಲಿಗೆ ಹರಿಬಿಡ್ತಿದ್ದಾನೆ, ಆರೋಪ ಮಾಡುವ ಮೊದಲು ಸಾಕ್ಷ್ಯಾಧಾರಗಳಿರಬೇಕು. ನನ್ನ ಮೇಲಿನ ಆರೋಪದಿಂದ ನಮ್ಮ ಮನೆಯವರಿಗೆ ಮರ್ಯಾದೆ ಹೋಗಿದೆ, ಸುಳ್ಳು ಆರೋಪ ಮಾಡಿರುವ ಸುಮಂತ್​ ಅಸಲಿಯತ್ತು ನಾನು ಬಿಚ್ಚಿಡ್ತೇನೆ. 2 ದಿನದ ಒಳಗಾಗಿ ಫಂಡಿಂಗ್ ವಿಚಾರದಲ್ಲಿ ದಾಖಲೆಗಳನ್ನು ನೀಡಬೇಕು. ಇಲ್ದೇ ಹೋದ್ರೆ ಕಾನೂನು ರೀತಿ ಹೋರಾಟ ನಡೆಸೋದಾಗಿ ಎಂದು ಚಂದನ್ ಕಿಡಿ ಕಾರಿದ್ದಾರೆ.

ಇದನ್ನೂ ಓದಿ : ಅಕ್ರಮ ಆರೋಪ – ಕೊನೆಗೂ ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ರಾಜೀನಾಮೆ!

Btv Kannada
Author: Btv Kannada

Read More