ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ವಿರುದ್ಧ ಅಪಪ್ರಚಾರ ಆರೋಪ – ವಿಜಯನಗರ ಠಾಣೆಯಲ್ಲಿ ವಸಂತ್ ಗಿಳಿಯಾರ್ ವಿರುದ್ಧ FIR!

ಮೈಸೂರು : ವಸಂತ್ ಗಿಳಿಯಾರ್ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಒಡನಾಡಿ ನಿರ್ದೇಶಕ ಸ್ಟ್ಯಾನ್ಲಿ ವಿರುದ್ಧ ಅಪಪ್ರಚಾರ ಆರೋಪದಡಿ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಸಂತ್ ಗಿಳಿಯಾರ್ ಮೇಲೆ FIR ದಾಖಲಾಗಿದೆ.

ವಸಂತ್ ಗಿಳಿಯಾರ್ ವಿರುದ್ಧ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಮೈಸೂರು ಜಿಲ್ಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನೆಲೆ ವಸಂತ್ ಗಿಳಿಯಾರ್ ವಿರುದ್ಧ FIR ದಾಖಲಾಗಿದೆ.

ಧರ್ಮದ ವಿಚಾರದಲ್ಲಿ ಸ್ಟ್ಯಾನ್ಲಿ ವಿರುದ್ಧ ಅಪಪ್ರಚಾರ ಮಾಡಿದ್ದು, ಆಧಾರ ರಹಿತ ಹೇಳಿಕೆಗಳನ್ನ ವಸಂತ್ ಗಿಳಿಯಾರ್ ನೀಡುತ್ತಿದ್ದಾರೆ. ನನ್ನ ವೈಯಕ್ತಿಕ ಹಾಗೂ ಶಾಂತಿಯುತ ಜೀವನಕ್ಕೆ ಧಕ್ಕೆ ತರುತ್ತಿದ್ದಾರೆ. ಹಾಗಾಗಿ ವಸಂತ್ ಗಿಳಿಯಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ : ಲಿಖಿತ್ ಸೂರ್ಯ ನಟನೆಯ “ರೂಮ್ ಬಾಯ್” ಟ್ರೇಲರ್ ರಿಲೀಸ್ – ಸೆ.12ಕ್ಕೆ ಸಿನಿಮಾ ತೆರೆಗೆ!

Btv Kannada
Author: Btv Kannada

Read More