ಲಿಖಿತ್ ಸೂರ್ಯ ನಟನೆಯ “ರೂಮ್ ಬಾಯ್” ಟ್ರೇಲರ್ ರಿಲೀಸ್ – ಸೆ.12ಕ್ಕೆ ಸಿನಿಮಾ ತೆರೆಗೆ!

ಒಂದಷ್ಟು ಪ್ರತಿಭಾನ್ವಿತರ ಪರಿಶ್ರಮದಿಂದ ತಯಾರಾಗಿರುವ ‘ರೂಮ್ ಬಾಯ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಕನ್ನಡದ ಖ್ಯಾತ ನಿರ್ದೇಶಕ ದಯಾಳ್ ಪದ್ಮನಾಭನ್ ಟ್ರೇಲರ್ ಅನಾವರಣ ಮಾಡಿದರು. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿರ್ದೇಶಕ ದಯಾಳ್ ಪದ್ಮನಾಭನ್ ಸೇರಿದಂತೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.

ನಿರ್ದೇಶಕ ದಯಾಳ್ ಪದ್ಮನಾಭನ್ ಅವರು, ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ತಮಿಳು ಹಾಗೂ ತೆಲುಗುವಿನಲ್ಲಿ ಕೋ ಆರ್ಡಿನೇಟ್ ಮಾಡಿಸಿ ಡಬ್ಬಿಂಗ್ ಮಾಡಿಸಿದ್ದೇನೆ. ಮೂರು ಭಾಷೆಯಲ್ಲಿಯೂ ಸಿನಿಮಾ ನೋಡಿದ್ದೇನೆ. ಟ್ರೇಲರ್ ಯಾವ ರೀತಿ ಎಂಗೇಜ್ ಆಗಿ ನಿಮ್ಮನ್ನು ಕೂರಿಸುತ್ತದೆಯೋ ಅದೇ ರೀತಿ ಸಿನಿಮಾ ನಿಮ್ಮನ್ನು ಎಂಗೇಜ್ ಆಗಿ ಕೂರಿಸುತ್ತದೆ. ಒಂದು ಸಿಂಪಲ್ ಸಿನಿಮಾ ನಿಮ್ಮನ್ನು ಎಂಗೇಜ್ ಜೊತೆಗೆ ಎಂಟರ್ಟೈನ್ಮೆಂಟ್ ಮಾಡುತ್ತದೆ. ಸ್ವಲ್ಪ ಭಯಪಡಿಸುತ್ತದೆ. ಹೊಸಬರಾಗಿ ನಿರ್ದೇಶಕ ರವಿ ಅವರು ಒಳ್ಳೆ ಕೆಲಸ ಮಾಡಿದ್ದಾರೆ. ನಾನು ಸ್ವಲ್ಪ ವಿಷಯಗಳನ್ನು ಗೈಡ್ ಮಾಡಿದ್ದೇನೆ. ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರೂಮ್ ಬಾಯ್ ಸಿನಿಮಾ ಇದೇ ತಿಂಗಳ 12ರಂದು ಆಗುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಇದು ನನ್ನ ನಿರ್ದೇಶನ ಚೊಚ್ಚಲ ಚಿತ್ರ. ಲಿಖಿತ್ ಬರೆದ ಕಥೆ ಇದು. ಇದೊಂದು ಡಿಫರೆಂಟ್ ಜಾನರ್ ಸಿನಿಮಾ. ಈ ಕಥೆಯನ್ನು ನಾನೇ ಪ್ರೊಡ್ಯೂಸ್ ಮಾಡುತ್ತೇನೆ ಎಂದು ಲಿಖಿತ್ ಮಾಡಿದ್ದಾನೆ. ಈ ಚಿತ್ರವನ್ನು 25ರಿಂದ 26‌ ದಿನದ ಚಿತ್ರೀಕರಣ ಹೋಟೆಲ್​ನಲ್ಲಿ ಮಾಡಿದ್ದೇವೆ. ಇದೊಂದು ದೊಡ್ಡ ಜರ್ನಿ. ದಯಾಳ್ ಸರ್ ನಮ್ಮ ಸಿನಿಮಾ ನೋಡಿದ್ದಾರೆ. ಡೀಸೆಂಟ್ ಸಿನಿಮಾ, ಒಳ್ಳೆ ಪ್ರಯತ್ನ. ಇದೇ ತಿಂಗಳ‌ 12ಕ್ಕೆ ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ನಿಮ್ಮ ಬೆಂಬಲ ಇರಲಿ ಎಂದು ನಿರ್ದೇಶಕ ರವಿ ನಾಗಡದಿನ್ನಿ ಹೇಳಿದರು.

ನಟ ಹಾಗೂ ನಿರ್ಮಾಪಕ ಲಿಖಿತ್ ಸೂರ್ಯ ಅವರು, ಇದು ಎಮೋಷನಲ್ ಸಿನಿಮಾ. ಫ್ಯಾಷನೇಟೆಡ್ ಆಗಿ ಮಾಡಿರುವ ಚಿತ್ರ. ಸ್ನೇಹ ಪೂರ್ವವಾಗಿ ಎಲ್ಲರೂ ಜೊತೆಯಾಗಿ ಚಿತ್ರ ಮಾಡಿದ್ದೇವೆ. ಆಕ್ಟರ್ ಆಗಬಹುದು. ಆದರೆ ನಾವೇ ನಿರ್ಮಾಣ ಮಾಡೋದುವುದು ಎಂದರೆ ಅದು ಸವಾಲು. ಇದು ಎಕ್ಸ್ ಪಿರಿಮೆಂಟಲ್ ಸಿನಿಮಾ. ಬೇರೆಯವರ ದುಡ್ಡಲ್ಲಿ ಸಿನಿಮಾ ಮಾಡುವುದಕ್ಕಿಂತ ನನ್ನ ದುಡ್ಡಲ್ಲಿ ಸಿನಿಮಾ ಮಾಡುವುದು ಉತ್ತಮ. ಗೆದ್ದರೂ ಸೋತರು ನಾನೇ ಜವಾಬ್ದಾರಿ. ಎಲ್ಲರೂ ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದರು.

ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ 10ಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ರವಿ ನಾಗಡದಿನ್ನಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಈ ಹಿಂದೆ ‘ಅಪರೇಷನ್ ನಕ್ಷತ್ರ’, ‘ಲೈಫ್ ಸೂಪರ್’, ‘ಗ್ರಾಮ’ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿರುವ ಲಿಖಿತ್ ಸೂರ್ಯ, ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದು, ಬಂಡವಾಳವನ್ನೂ ಹೂಡಿದ್ದಾರೆ. ಲಿಖಿತ್ ಸೂರ್ಯಗೆ ಜೋಡಿಯಾಗಿ ರಕ್ಷಾ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್, ಯಶ್ ಶೆಟ್ಟಿ, ರಘು ಶಿವಮೊಗ್ಗ, ವಜರಂಗ ಶೆಟ್ಟಿ, ಪದ್ಮಿನಿ, ರಾಹುಲ್,ರೋಷನ್, ರಜನಿ, ವಿಕ್ಕಿ, ಯಶಾ ಸೇರಿದಂತೆ ಒಂದಷ್ಟು ತಾರಾಗಣ ಸಿನಿಮಾದಲ್ಲಿದೆ.

ಸೈಕಾಲಾಜಿಕಲ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ‘ರೂಮ್ ಬಾಯ್’ ಸಿನಿಮಾಕ್ಕೆ ರೋಣದ ಬಕ್ಕೇಶ್ ಸಂಗೀತ ನೀಡಿದ್ದು, ಧನಪಾಲ್ ನಾಯಕ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಕ್ರಿಯೇಟಿವ್ ಹೆಡ್ ಆಗಿ ಹಿರಿಯ ಸಿನಿಮಾ ಪತ್ರಕರ್ತ ವಿಜಯ್ ಭರಮಸಾಗರ್ ಕೆಲಸ ನಿರ್ವಹಿಸಿದ್ದು, ಐ ಕಾನ್ ಪ್ರೊಡಕ್ಷನ್ ಅಡಿ ಲಿಖಿತ್ ಸೂರ್ಯ ಸಿನಿಮಾಗೆ ಹಣ ಹಾಕಿದ್ದಾರೆ. ಇದೇ ತಿಂಗಳ 12ಕ್ಕೆ ಚಿತ್ರ ತೆರೆಗೆ ಎಂಟ್ರಿ ಕೊಡಲಿದೆ.

ನಿರ್ದೇಶಕ ರವಿ ನಾಗಡದಿನ್ನಿ ಅವರಿಗೆ ಕುಟುಂಬದವರಾದ ರಾಮಣ್ಣ, ಬಲಬೀಮ ,ಅನ್ನಪೂರ್ಣ, ನರೇಶ್ ಹಾಗೂ ಗೆಳೆಯರಾದ ಅಂಬರೀಶ್ ಎಚ್ ಕೆ, ಅಶೋಕ್ ನಾಯಕ, ಸುನಿಲ್, ಶಿವು ಜಕ್ಕಲದಿನ್ನಿ, ಬಂದೆನವಾಜ್, ರವಿಕುಮಾರ್ ಕಾನಪುರು, ಸೂಗ್ರೇಶ್ ಹೂಗಾರ್, ಸಂತೋಷ್ ಹೆಬ್ಬಾಳ್ ಹಾಗೂ ಹಲವು ಸ್ನೇಹಿತರ ಬೆಂಬಲವಿದೆ.

ಇದನ್ನೂ ಓದಿ : ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಶೂಟಿಂಗ್ ಕಂಪ್ಲೀಟ್ – ಶೀಘ್ರದಲ್ಲೇ ಸಿನಿಮಾ ತೆರೆಗೆ!

Btv Kannada
Author: Btv Kannada

Read More