ಅಸಭ್ಯ ಕಾಮೆಂಟ್‌ ಹಾಕೋರಿಗೆ ಜೈಲು ಫಿಕ್ಸ್.. ಫೇಕ್​ ಐಡಿ ಆದ್ರೂ ಶಿಕ್ಷೆ ಗ್ಯಾರಂಟಿ – ಡಾ.ನಾಗಲಕ್ಷ್ಮಿ ಚೌಧರಿ ವಾರ್ನಿಂಗ್!

ಸೋಶಿಯಲ್​ ಮೀಡಿಯಾದಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಕಾಮೆಂಟ್‌ ಹಾಕೋದು ದಿನೇ ದಿನೇ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ನಟಿ ರಮ್ಯಾ ಅವರಿಗೂ ದರ್ಶನ್ ಫ್ಯಾನ್ಸ್​ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಹಾಕಿದ್ದರು. ಈ ಸಂಬಂಧ ರಮ್ಯಾ ದೂರು ಕೂಡ ದಾಖಲಿಸಿದರು. ಇದೀಗ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಕಾಮೆಂಟ್‌ಗಳನ್ನು ಹಾಕುವವರಿಗೆ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಸಂದರ್ಶನವೊಂದರಲ್ಲಿ ಈ ವಿಷಯವನ್ನು ರಿವೀಲ್​ ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಹೆಣ್ಣುಮಕ್ಕಳ ಪೋಸ್ಟ್​ಗೆ ಕಮೆಂಟ್​ ಹಾಕುವಾಗ ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವ ಬಗ್ಗೆ ಅವರು ತಿಳಿಸಿದ್ದಾರೆ. ಈಚೆಗೆ ಸ್ಯಾಂಡಲ್​ವುಡ್​ ನಟಿ ರಮ್ಯಾ ಅವರು, ತಮ್ಮ ವಿರುದ್ಧ ಅಶ್ಲೀಲ ಕಮೆಂಟ್​ ಹಾಕಿದವರ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಅವರನ್ನು ಅರೆಸ್ಟ್​ ಮಾಡಲಾಗಿದೆ. ಅವರ ಪೈಕಿ ಹೆಚ್ಚಿನವರು ಗಾರೆ, ಕೂಲಿ ಕೆಲಸ ಮಾಡುವವರು. ಇಂಥ ಕಮೆಂಟ್​ ಹಾಕಿದ್ದಕ್ಕೆ ಜೈಲು ಶಿಕ್ಷೆ, ಕೋರ್ಟ್​, ಕಚೇರಿ ಅಲೆಯುವುದು ಬೇಕಾ ಎಂದಿದ್ದಾರೆ.

ಇನ್ನು ಫೇಕ್ ಐಡಿ ಬಳಸಿ ಅಸಭ್ಯ ಕಾಮೆಂಟ್‌ಗಳನ್ನು ಮಾಡಿದರೂ ತಪ್ಪಿತಸ್ಥರನ್ನು ಪತ್ತೆ ಹಚ್ಚಬಹುದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಇನ್ನು ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಕೆಲವೊಂದು ವಿಷಯಗಳನ್ನು ಪೋಸ್ಟ್​ ಮಾಡಿದಾಗ ತಮಗೂ ಇದೇ ರೀತಿಯ ಅನುಭವ ಆಗಿದೆ ಎಂದು ಡಾ.ನಾಗಲಕ್ಷ್ಮಿ ಹೇಳಿದರು. ಇದೇ ವೇಳೆ ಅವರು ಹೆಣ್ಣುಮಕ್ಕಳಿಗೂ ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ, ನಿಮ್ಮ ವಿರುದ್ಧ ಅಶ್ಲೀಲ ಎನ್ನುವ ಕಮೆಂಟ್​ ಮಾಡಿದರೆ ಅಂಥವರ ವಿರುದ್ಧ ದೂರು ದಾಖಲು ಮಾಡಲು ಹಿಂಜರಿಯಬೇಡಿ, ಅಂಜಿಕೆ ಪಟ್ಟುಕೊಳ್ಳದೇ ದೂರು ದಾಖಲು ಮಾಡಿ ಎಂದು ಹೇಳಿದ್ದಾರೆ. ಆದ್ದರಿಂದ ಇನ್ನುಮುಂದೆ ಕಮೆಂಟ್​ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಇದು ಸೂಚಿಸುತ್ತದೆ.

ಇದನ್ನೂ ಓದಿ : ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್​​​​​​​​​​​​​​​​​​​​​​​ಟೇಬಲ್ ಹೃದಯಾಘಾತದಿಂದ ಸಾವು!

Btv Kannada
Author: Btv Kannada

Read More