ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್​​​​​​​​​​​​​​​​​​​​​​​ಟೇಬಲ್ ಹೃದಯಾಘಾತದಿಂದ ಸಾವು!

ಕಲಬುರಗಿ : ಕರ್ತವ್ಯನಿರತ ಪೊಲೀಸ್ ಹೆಡ್ ಕಾನ್ಸ್​​​​​​​​​​​​​​​​​​​​​​​ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. 46 ವರ್ಷದ ಮನೋಹರ ‌ಪವಾರ್ ಮೃತ ಹೆಡ್ ಕಾನ್ಸ್​​​​​​​​​​​​​​​​​​​​​​​ಟೇಬಲ್.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಪೋಲಿಸ್ ಠಾಣೆಯ ಮುಖ್ಯಪೇದೆ ಮನೋಹರ್ ಕರ್ತವ್ಯದ ಮೇಲೆ ಸೇಡಂಗೆ ಬಂದಿದ್ದಾಗ ಹಾರ್ಟ್​ ಅಟ್ಯಾಕ್ ಆಗಿದೆ. ನಂತರ ಮನೋಹರ್ ಅವರನ್ನು ಆ್ಯಂಬುಲೆನ್ಸ್​ನಲ್ಲಿ ಕಲಬುರಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : BDA ವಿಜಿಲೆನ್ಸ್​ನಲ್ಲಿ ಬೆಂಚ್ ಕಾಯಿಸುತ್ತಿದ್ದಾರೆ ಪೊಲೀಸರು.. ಅವಧಿ ಮುಗಿದವರಿಗೆ ಕೋಕ್ ಎಂದ್ರಾ SP ಲಕ್ಷ್ಮಿ ಗಣೇಶ್!

Btv Kannada
Author: Btv Kannada

Read More