BDA ವಿಜಿಲೆನ್ಸ್​ನಲ್ಲಿ ಬೆಂಚ್ ಕಾಯಿಸುತ್ತಿದ್ದಾರೆ ಪೊಲೀಸರು.. ಅವಧಿ ಮುಗಿದವರಿಗೆ ಕೋಕ್ ಎಂದ್ರಾ SP ಲಕ್ಷ್ಮಿ ಗಣೇಶ್!

ಬೆಂಗಳೂರು : ಕಣ್ಣಿಗೆ ಮಣ್ಣೆರೆಚೋ ಕೆಲ್ಸ ಅಂದ್ರೆ ಇದೇ ಅನ್ಸುತ್ತೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅರ್ಥಾತ್ BDAಯಲ್ಲಿ ತನಿಖೆಯನ್ನ ನಡೆಸೋಕೆ ಅಂತಾನೇ ವಿಜಿಲೆನ್ಸ್ ಫೋರ್ಸ್ ಇದೆ. BDA ನಲ್ಲಾಗುವ ಅಕ್ರಮವನ್ನ ತಡೆಯುವಂತಹ ಹಾಗೂ ಪ್ರಕರಣದ ತನಿಖೆಯನ್ನ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಪೊಲೀಸರ ತಂಡ ಇರುತ್ತೇ ಅದುವೇ BDA ವಿಜಿಲೆನ್ಸ್.

ಈ BDA ವಿಜಿಲೆನ್ಸ್ ನಲ್ಲಿ ಕಾನ್ಸ್​ಟೇಬಲ್​ನಿಂದ ಹಿಡಿದು ASI ಹುದ್ದೆಯೊರೆಗಿನ ಸಿಬ್ಬಂದಿಗಳು ಮೂರು ವರ್ಷ ಮಾತ್ರ BDAನಲ್ಲಿ ಕೆಲಸವನ್ನ ನಿರ್ವಹಿಸಬಹುದು. ಇದರಲ್ಲಿ CAR ರಿಸರ್ವ್ ಪೊಲೀಸರು ಹಾಗೂ CIVIL ಪೊಲೀಸರು ಕೂಡ ಕರ್ತವ್ಯವನ್ನ ನಿರ್ವಹಿಸುತ್ತಾರೆ. ದಾಖಲೆಗಳಿಲ್ಲದೇ, ಪರವಾನಿಗೆ ಪಡೆಯದೇ ಇರುವ ಲೇಔಟ್​ಗಳನ್ನ ಗುರುತಿಸುವುದು ಹಾಗೂ ಅವರ ವಿರುದ್ಧ ಕ್ರಮವನ್ನ ತೆಗೆದುಕೊಳ್ಳುವ ಕೆಲಸ.

ಅದೇ ರೀತಿ BDA ಸ್ವತ್ತುಗಳನ್ನ ಕಾನೂನು ಬದ್ಧವಾಗಿ ವಶಕ್ಕೆ ಪಡೆಯುವ ಟಾಸ್ಕ್ ಫೋರ್ಸ್ ಕೂಡ ಈ BDA ವಿಜಿಲೆನ್ಸ್ ಮಾಡುತ್ತೆ. ಇಂತಹ ಒಂದೊಳ್ಳೆ ಉದ್ದೇಶದಿಂದ ಕೆಲಸವನ್ನ ನಿರ್ವಹಸುವ ವಿಜಿಲೆನ್ಸ್​ನಲ್ಲಿ ಅವಧಿಮೀರಿಯೂ ಅದೇ ಹುದ್ದೆಯಲ್ಲಿ ಮುಂದುವರಿಯುವ ಕೆಲಸವನ್ನ ಕೆಲ PC ಹಾಗೂ ಹೆಡ್ ಕಾನ್ಸ್​ಟೇಬಲ್​​ಗಳು ಮಾಡ್ತಿದ್ದಾರೆ. 2019ರಲ್ಲಿ BDA ವಿಜಿಲೆನ್ಸ್ ಗೆ ಬಂದು ಮೂರು ವರ್ಷ ಮೇಲ್ಪಟ್ಟಿದ್ದರೂ ಕೂಡ ಕೆಲ CAR ಹಾಗೂ CIVIL ಕಾನ್ಸ್​ಟೇಬಲ್​​​ಗಳು ಮೊಳೆಹೊಡೆದುಕೊಂಡಿರುವ ಕೆಲಸವನ್ನ ಮಾಡಿದ್ದಾರೆ. ಮೂರು ವರ್ಷ ಮೇಲ್ಪಟ್ಟೂ ಎಲ್ಲೂ ಅಲುಗಾಡದ ಕೆಲ BDA ವಿಜಿಲೆನ್ಸ್ ಪೊಲೀಸ್ ಸಿಬ್ಬಂದಿ ಇಂತಿದ್ದಾರೆ.

ಅವಧಿ ಮುಗಿದ CAR ಟ್ರೂಪ್..!

ಯೋಗೇಶ್ವರ್ ಆಚಾರ್ ‍- ಕಾನ್ಸ್ ಟೇಬಲ್
ಶ್ರೀನಿವಾಸ್ ‍- ಹೆಡ್ ಕಾನ್ಸ್ ಟೇಬಲ್
ರಂಗಸ್ವಾಮಿ – ಕಾನ್ಸ್ ಟೇಬಲ್
ಗುರುಮೂರ್ತಿ – ಕಾನ್ಸ್ ಟೇಬಲ್

ಗುರುಮೂರ್ತಿ - ಕಾನ್ಸ್ ಟೇಬಲ್
ಗುರುಮೂರ್ತಿ – ಕಾನ್ಸ್​ಟೇಬಲ್
ಶ್ರೀನಿವಾಸ್ ‍- ಹೆಡ್ ಕಾನ್ಸ್ ಟೇಬಲ್
ಶ್ರೀನಿವಾಸ್ ‍- ಹೆಡ್ ಕಾನ್ಸ್​ಟೇಬಲ್
ಯೋಗೇಶ್ವರ್ ಆಚಾರ್ ‍- ಕಾನ್ಸ್ ಟೇಬಲ್
ಯೋಗೇಶ್ವರ್ ಆಚಾರ್ ‍- ಕಾನ್ಸ್​ಟೇಬಲ್
ರಂಗಸ್ವಾಮಿ - ಕಾನ್ಸ್ ಟೇಬಲ್
ರಂಗಸ್ವಾಮಿ – ಕಾನ್ಸ್​ಟೇಬಲ್

ಇನ್ನು ಅವಧಿ ಮುಗಿದ ಸಿವಿಲ್ ಟ್ರೂಪ್..!

ಹರೀಶ – ಕಾನ್ಸ್​ಟೇಬಲ್
ಭಾಗ್ಯಾ – ಕಾನ್ಸ್​ಟೇಬಲ್

ಹರೀಶ - ಕಾನ್ಸ್ ಟೇಬಲ್
ಹರೀಶ – ಕಾನ್ಸ್​ಟೇಬಲ್

ಇಷ್ಟು ಮಂದಿ ಇನ್ನೂ ಕೂಡ BDA ವಿಜಿಲೆನ್ಸ್ ನಲ್ಲೇ 7 ವರ್ಷ ಪೂರ್ಐಸಿದರೂ ಅಲ್ಲೇ ಕರ್ತವ್ಯವನ್ನ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಹಲವು ಸಾರ್ವಜನಿಕ ದೂರುಗಳೂ ಕೂಡ BDA ವಿಜಿಲೆನ್ಸ್ SP ಲಕ್ಷ್ಮಿ ಗಣೇಶ್ ರವರಿಗೆ ಬಂದಿದೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಂತಲೇ ಕರೆಸಿಕೊಂಡಿರುವ ಲಕ್ಷ್ಮಿ ಗಣೇಶ್ ರವರು ಇದೀಗ ಅವಧಿ ಮೀರಿ ಕರ್ತವ್ಯವನ್ನ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಇದೀಗ ಕೋಕ್ ಕೊಡಲು ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

BDA ವಿಜಿಲೆನ್ಸ್ SP ಲಕ್ಷ್ಮಿ ಗಣೇಶ್
BDA ವಿಜಿಲೆನ್ಸ್ SP ಲಕ್ಷ್ಮಿ ಗಣೇಶ್

ಇದನ್ನೂ ಓದಿ : ಬಾಗಲಕೋಟೆಯಲ್ಲಿ ಎರಡು ಬೈಕ್​​ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ!

 

 

Btv Kannada
Author: Btv Kannada

Read More