ಬೆಂಗಳೂರು : ಭೂಕಬಳಿಕೆ ಮತ್ತು ಜಾತಿ ನಿಂದನೆ ಆರೋಪದಡಿ ದಿಯಾ ಚಿತ್ರದ ನಿರ್ಮಾಪಕ ಡಿ. ಕೃಷ್ಣ ಚೈತನ್ಯ ವಿರುದ್ಧ FIR ಬೆಂಗಳೂರು ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದಿಯಾ ಚಿತ್ರದ ನಿರ್ಮಾಪಕ ಡಿ. ಕೃಷ್ಣ ಚೈತನ್ಯ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದು, ದೂರಿನಲ್ಲಿ ನಿರ್ಮಾಪಕ ಡಿ. ಕೃಷ್ಣ ಚೈತನ್ಯ ಅವರು ಭೂಕಬಳಿಕೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

FIRನಲ್ಲಿ ಏನಿದೆ?
ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ ಕಸವನಹಳ್ಳಿಯ ಸರ್ವೆ ನಂ.52 ರ 3.25 ಗುಂಟೆ ಜಮೀನಿಗೆ ರಾಮಮೂರ್ತಿ ಅವರು ಕಾನೂನು ಬದ್ಧ ಮಾಲೀಕರಾಗಿದ್ದು, ಈ ಜಮೀನನ್ನು ದೂರುದಾರೆ ಹಾಗೂ ಕೋದಂಡಚಾರಿ ಎಂಬುವವರಿಗೆ ನರ್ಸರಿ ಮಾಡುವ ಉದ್ದೇಶದಿಂದ ದಿನಾಂಕ : 10-08-2020ರಂದು ಅಧಿಕೃತವಾಗಿ ಭೋಗ್ಯಕ್ಕೆ ನೀಡಿದ್ದರು.
ಹೀಗಿರುವಾಗ ಪಾರ್ಚುನರ್ ಕಾರಲ್ಲಿ, ಕೃಷ್ಣಚೈತನ್ನ, ಸತ್ಯನಾರಾಯಣ ರೆಡ್ಡಿ ಹಾಗೂ ಅವರ ಸಹಚರರು ನರ್ಸರಿ ಮಾಡಿಕೊಂಡಿರುವ ಸ್ವತ್ತಿನ ಒಳಗೆ ಬಂದು ಬೀಗವನ್ನು ಮುರಿದು ಕೃಷ್ಣ ಚೈತನ್ಯ, ಸತ್ಯನಾರಾಯಣ ರೆಡ್ಡಿ ಇವರ ಸಹಚರರು 5-6 ಜನ ಕಾನೂನಿಗೆ ವಿರುದ್ಧವಾಗಿ ಅತಿಕ್ರಮ ಪ್ರದೇಶ ಮಾಡಿ ಗೇಟ್ಗೆ ಅಳವಡಿಸಿರುವ ಬೀಗವನ್ನು ತೆಗೆದು, ದೂರುದಾರೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಬೈದ ನಂತರ ಕೃಷ್ಣಚೈತನ್ಯ, ಸತ್ಯನಾರಾಯಣ ರೆಡ್ಡಿ ಇಬ್ಬರು ದೂರುದಾರೆಯ ತಲೆಯ ಕೂದಲನ್ನು ಎಳೆದು ಕಾಲುಗಳಿಂದ ಒದ್ದು, ಎದೆಯ ಭಾಗಕ್ಕೆ ಕೈ ಹಾಕಿ ತಳ್ಳಿರುತ್ತಾರೆ.
ನಂತರ ಸತ್ಯನಾರಾಯಣ ರೆಡ್ಡಿ ಎಂಬುವವನು ಅಲ್ಲಿಯೇ ಬಿದ್ದಿದ್ದ ಒಂದು ಕೋಲಿನಿಂದ ಕಾಲಿನ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಆಗ ಅಲ್ಲಿಯೇ ಇದ್ದ ಕೋದಂಡಾಚಾರಿಯು ಗಲಾಟೆ ಮಾಡಿದ್ದಕ್ಕೆ ಪ್ರಶ್ನೆ ಮಾಡಿದಾಗ ಅವರಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ, ಈ ಜಾಗ ನಮಗೆ ಸೇರಿದ್ದು, ಈ ಕೂಡಲೆ ಜಾಗವನ್ನು ಖಾಲಿ ಮಾಡದಿದ್ದರೆ ನಿಮ್ಮನ್ನು ಜಾಗದಲ್ಲಿಯೆ ಸಾಯಿಸಿ ಇಲ್ಲಿಯೇ ಹೂತು ಹಾಕುತ್ತೇವೆಂದು ಎಂದು ಬೆದರಿಕೆ ಹಾಕಿದ್ದಾರೆ. ನಂತರ ಅದೇ ದಿನ ದೂರುದಾರರು ಬೆಳ್ಳಂದೂರು ಪೋಲಿಸ್ ಠಾಣೆಗೆ ದೂರು ನೀಡಲು ಹೋಗಿದ್ದು, ಪೊಲೀಸರು ದೂರು ಸ್ವೀಕರಿಸಿಲು ನಿರಾಕರಿಸಿದ್ದಾರೆ. ನಂತರ ಈ ದಿನ ತಡವಾಗಿ ಬಂದು ದೂರನ್ನು ದಾಖಲಿಸುತ್ತಿರುವುದಾಗಿ ಸದರಿ ಆಸಾಮಿಗಳ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.


ಇದನ್ನೂ ಓದಿ : ‘TRUMP IS DEAD’.. ಟ್ರಂಪ್ ನಿಧನದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್!







