ನಟಿ ಸಾಯಿ ಧನಿಷ್ಕಾ ಜೊತೆ ತಮಿಳು ನಟ ವಿಶಾಲ್ ನಿಶ್ಚಿತಾರ್ಥ – ಇಲ್ಲಿದೆ ಎಂಗೇಜ್ಮೆಂಟ್ ಫೋಟೋಸ್!

ತಮಿಳು ಚಿತ್ರರಂಗದ ಸ್ಟಾರ್ ನಟ ವಿಶಾಲ್ ಅವರು ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಇದೀಗ ನಟ ವಿಶಾಲ್ ಅವರು ನಟಿ ಸಾಯಿ ಧನಿಷ್ಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೇರಿದ್ದು, ಫೋಟೋಗಳು ಸದ್ಯ ವೈರಲ್ ಆಗಿವೆ.

ಕೆಲ ತಿಂಗಳ ಹಿಂದೆ ವಿಶಾಲ್ ಅವರು ತಾವು ನಟಿ ಸಾಯಿ ಧನಿಷ್ಕಾ ಜೊತೆ ಪ್ರೀತಿಯಲ್ಲಿದ್ದು ಶೀಘ್ರವೇ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ಹೇಳಿದ್ದರು. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದು ನಟನ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಸಾಯಿ ಧನಿಷ್ಕ ಸಹ ತಮಿಳು ಚಿತ್ರರಂಗದ ನಟಿಯಾಗಿದ್ದು, ಈ ಹಿಂದೆ ‘ಕಬಾಲಿ’ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ಅಕ್ರಮವಾಗಿ ಸಂಗ್ರಹಿಸಿದ್ದ ಮಿನಿ ಸಿಲಿಂಡರ್​ಗಳು ಸ್ಪೋಟ – 4 ಮಂದಿಗೆ ಗಂಭೀರ ಗಾಯ!

Btv Kannada
Author: Btv Kannada

Read More