10 ಕೋಟಿ ರೂ. ವಂಚನೆ – ತುಮಕೂರು ಕಾಂಗ್ರೆಸ್ ಲೀಡರ್ ಎಸ್.ಟಿ ಶ್ರೀನಿವಾಸ್ ಕಾರವಾರ ಪೊಲೀಸರಿಂದ ಅರೆಸ್ಟ್!

ತುಮಕೂರು : 10 ಎಕರೆ ಜಮೀನು ಮಾರಾಟ ಮಾಡುವುದಾಗಿ 10 ಕೋಟಿ ರೂ. ಹಣ ಪಡೆದು ವಂಚಿಸಿರುವ ಆರೋಪದ ಮೇಲೆ ತುಮಕೂರು ಕಾಂಗ್ರೆಸ್ ಮುಖಂಡ ಎಸ್ ಟಿ ಶ್ರೀನಿವಾಸ್​ನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಪ್ರಭಾವಿ ರಾಜಕೀಯ ನಾಯಕ ಎಂದು ಎಸ್ ಟಿ ಶ್ರೀನಿವಾಸ್​ 10 ಕೋಟಿ ರೂ. ವಂಚನೆ ಮಾಡಿದ್ದಾನೆ. ಡಿಸೆಂಬರ್​ನಲ್ಲಿ ಧಾರವಾಡ ಹೈಕೋರ್ಟ್​ನ ಪೀಠ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದೀಗ ಕಾರವಾರ ಪೊಲೀಸರು ಎಸ್ ಟಿ ಶ್ರೀನಿವಾಸ್​ನ್ನು ಅರೆಸ್ಟ್ ಮಾಡಿದ್ದಾರೆ.

FIRನಲ್ಲಿ ಏನಿದೆ?

ಭರಮಪ್ಪ ಎಂಬಾತ ಕಾರವಾರದ ಹಬ್ಬುವಾಡಾದಲ್ಲಿರುವ ಕಂಪನಿಯ ಆಫೀಸಿನಲ್ಲಿ ಪ್ರಾಜೆಕ್ಟ್ ಇನ್​ಚಾರ್ಜ್​ ಕೆಲಸ ಮಾಡುತ್ತಿದ್ದ. ಭರಮಪ್ಪ ಕಂಪನಿಗೆ ಕಳೆದ 2022 ನೇ ಸಾಲಿನಲ್ಲಿ ಸಮುದ್ರ ಬಂದರು ಅಭಿವೃದ್ಧಿ ಮಾಡಲು ಪೋರ್ಟನ್ನು ಹೈವೇ ಮತ್ತು ರೈಲ್ವೆ ಲೈನಗೆ ಜೋಡಿಸಲು ಜಮೀನಿನ ಅವಶ್ಯಕತೆಯಿತ್ತು. ಆಗ ಅಂಕೋಲಾದಲ್ಲಿ ರೀಯಲ್ ಎಸ್ಟೇಟ್ ದಂಧೆ ನಡೆಸುವ ಆರೋಪಿ ನಂ.1 ಅಜೀತ ಗಣಪತಿ ನಾಯಕ ಸಂಪರ್ಕಕ್ಕೆ ಸಿಕ್ಕಿದ್ದ, ಕಳೆದ 2022ರ ಅಗಸ್ಟ್ ತಿಂಗಳಲ್ಲಿ ಅಂಕೋಲಾದ ಕಾಮತ್ ಹೊಟೇಲ್​ನಲ್ಲಿ ಆರೋಪಿ 1 ಅಜೀತ ಗಣಪತಿ ನಾಯಕ ಮತ್ತು ಆರೋಪಿ 3 ತಿರುಪತಿಸ್ವಾಮಿ ಎಸ್. ಶ್ರೀನಿವಾಸ ಜಮೀನು ಖರೀದಿಸುವ ಬಗ್ಗೆ ಕಂಪನಿ ಮಾತುಕತೆಯಾಗಿತ್ತು.

ನಂತರ ದಿನಾಂಕ : 13-09-2024 ಮತ್ತು ದಿನಾಂಕ :14-09-2024 ರಂದು ಬೆಂಗಳೂರು ವಸಂತನಗರದ ಶಾಂಗ್ರೀಲಾ ಹೊಟೇಲ್​ನಲ್ಲಿ ಇಬ್ಬರೂ ಆರೋಪಿತರು ಕಂಪನಿಯ ಎಮ್.ಎಸ್ ಪಾತ್ರುಡು ಮತ್ತು ಇತರೆ ಅಧಿಕಾರಿಗಳು ಸೇರಿ ಮಾತುಕತೆ ನಡೆಸಿದ್ದು, ಆರೋಪಿತರು ತಾವು ಆರೋಪಿ ನಂ.2 ಗುರುಪ್ರಸಾದ ಸುಧಾಕರ ರೇವಣಕರ, ಇವರ ಮುಖಾಂತರ ಅಂಕೋಲಾದಲಿ ಜಮೀನು ಒದಗಿಸಿ ಕೊಡುವುದಾಗಿ ಆಶ್ವಾಸನೆ ನೀಡಿ, ದಿನಾಂಕ :29-09-2022 ರಂದು ಆರೋಪಿ ನಂ.1, 2 ನೇಯವರು ಮುಂಬೈನ ಹೊಟೇಲ್ ರೆಗನ್ಸಿಯಲ್ಲಿ ಭರಮಪ್ಪ ಕಂಪನಿಗೆ ಕೇಣಿಯಲ್ಲಿ 35 ಎಕರೆ ಜಮೀನು ಖರೀದಿಸಿ ಕೊಡುವುದಾಗಿ ಒಪ್ಪಿ ಆರೋಪಿ 2ನೊಂದಿಗೆ “ಮೆಮೊರೆಂಡ್ ಆಫ್ ಅಂಡರಸೆಂಡಿಗ್”(ಎಮ್.ಓ.ಯು) ಮಾಡಿಕೊಂಡಿದ್ದರು.

ಆರೋಪಿ 1, 2 ಬ್ಯಾಂಕ್ ಆಕೌಂಟಿಗೆ ಹಣ ಹಾಕಲು ಭರಮಪ್ಪ ಕಂಪನಿಗೆ ತಿಳಿಸಿದಂತೆ ದಿನಾಂಕ : 19-10-2022 ರಂದು 2,91,06,000/-ರೂಪಾಯಿ ಹಣವನ್ನು ಹಾಕಿ ಆನಂತರದಲ್ಲಿ ಹಂತ ಹಂತವಾಗಿ ಹಣ ಜಮಾ ಮಾಡಿದ್ದು, ಸುಮಾರು 10 ಎಕ್ರೆ ಜಮೀನನ್ನು ಆರೋಪಿತರು ಭರಮಪ್ಪ ಕಂಪನಿಯ ಹೆಸರಿಗೆ ವಕೀಲರಾದ ವಿನೋದ ವಿಠಲ ಶಾನಭಾಗ ರವರ ಮುಖಾಂತರ ಮಾಡಿಕೊಟ್ಟಿದ್ದರು. ಭರಮಪ್ಪ ಕಂಪನಿಯಿಂದ ಆರೋಪಿ 2 ಅಕೌಂಟಿಗೆ ಒಟ್ಟು 14,71,06,035/- ರೂಪಾಯಿಗಳನ್ನು ಹಾಕಿದ್ದು, ಆದರೆ ಆರೋಪಿತರು ಉಳಿದ ಜಮೀನುಗಳನ್ನು ಖರೀಧಿಸಿ ಸೇಲ್ ಡೀಡ್ ಮಾಡಿ ಕೊಡಲು ವಿಳಂಬ ಮಾಡಿದಾಗ ಆರೋಪಿತರಿಗೆ ವಿಚಾರಿಸಿದಾಗ ತಮಗೆ ಇನ್ನುಳಿದ ಜಮೀನನ್ನು ಕೊಡಿಸಲು ಆಗ್ತಾ ಇಲ್ಲಾ ಅಂತಾ ಹೇಳಿದ್ದರು.

ನಂತರ ಭರಮಪ್ಪ ಕಂಪನಿಯು ದಿನಾಂಕ : 10-09-2024 ರಂದು ಕಾರವಾರ ಕಛೇರಿಯಲ್ಲಿ ಕಂಪನಿಗೆ ಸೇಲ್ ಡೀಲ್ ಮಾಡಿಕೊಟ್ಟ 10 ಎಕ್ರೆ ಜಮೀನಿನ ಹಣವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಕಂಪನಿಯಿಂದ ಸಂದಾಯ ಮಾಡಿದ 8,02,35,694/- ರೂಪಾಯಿ ಹಣವನ್ನು ಕಂಪನಿಗೆ ವಾಪಸ್ ಹಾಕಲು ಆರೋಪಿ 1, 2 ನೇಯವರಿಗೆ ತಿಳಿಸಿದಾಗ ಆರೋಪಿತರು ಹಂತ ಹಂತವಾಗಿ ಹಣ ಹಾಕುತ್ತೇವೆ ಅಂತಾ ಹೇಳಿದ್ದು, ಆರೋಪಿ 2 ಬ್ಯಾಂಕ್ ಅಕೌಂಟ್​ನ 8 ಕೋಟಿ ರೂಪಾಯಿಯ ಚೆಕ್ ನ್ನು ದಿನಾಂಕ: 22-10-2024 ರ ದಿನಾಂಕ ನಮೂದಿಸಿ ಕೊಟ್ಟಿದ್ದು, ಅನಂತರದಲ್ಲಿ ಆರೋಪಿ 2 ಕಂಪನಿಯು ಉಳಿದ ಹಣದ ಬಗ್ಗೆ ವಿಚಾರಿಸಿದಾಗ ಆರೋಪಿ 1, ಆರೋಪಿ 2 ಅಕೌಂಟನಲ್ಲಿದ್ದ ಹಣವನ್ನು ಚೆಕ್ ಮುಖಾಂತರ ಬೇರೆ ಬೇರೆಯವರ ಮುಖಾಂತರ ವಿಥ್ ಡ್ರಾ ಮಾಡಿಸಿಕೊಂಡು ತಾವು ದುರುಪಯೋಗಪಡಿಸಿಕೊಂಡಿರುವುದಾಗಿ ತಿಳಿಸಿದ್ದರು. ಆದರೆ ಇಬ್ಬರೂ ಆರೋಪಿತರು ಕಂಪನಿಗೆ ನೀಡಬೇಕಾದ ಹಣವನ್ನು ಜಮಾ ಮಾಡದೆ ಇದ್ದಾಗ, ಭರಮಪ್ಪ ಕಂಪನಿಯಿಂದ ಆರೋಪಿತರು ನೀಡಿದ ಚೆಕ್​ನಲ್ಲು ಬ್ಯಾಂಕಿನಲ್ಲಿ ಹಾಕಿದಾಗ ಆರೋಪಿತನ ಅಕೌಂಟಿನಲಿ ಹಣ ಇಲ್ಲದೆ ಚೆಕ್ ಬೌನ್ಸ್​ ಆಗಿದೆ.

ಭರಮಪ್ಪ ಕಂಪನಿಯು ಕೇಣಿಯಲಿ ಸಮುದ್ರ ಬಂದರು ಅಭಿವೃದ್ಧಿ ಮಾಡಲು ಪೋರ್ಟನ್ನು ಹೈವೇ ಮತ್ತು ರೈಲ್ವೆ ಲೈನಗೆ ಜೋಡಿಸಲು ಜಮೀನಿನ ಹುಡುಕಾಟದಲ್ಲಿರುವಾಗ ಮೂವರು ಆರೋಪಿತರು ಭರಮಪ್ಪ ಕಂಪನಿಯೊಂದಿಗೆ ಸಂಪರ್ಕಕ್ಕೆ ಬಂದು ತಾವು ಕಂಪನಿಗೆ ಬೇಕಾದ 35 ಎಕ್ರೆ ಜಮೀನನ್ನು ಸೇಲ್ ಡೀಡ್ ಮುಖಾಂತರ ಖರೀಧಿ ಮಾಡಿ ಕೊಡುವುದಾಗಿ ಭರಮಪ್ಪ ಕಂಪನಿಗೆ ನಂಬಿಸಿ ಕಂಪನಿಯೊಂದಿಗೆ “ಮೆಮೊರೆಂಡ್ ಆಫ್ ಅಂಡರಗೊಂಡಿಗ್”(ಎಮ್.ಓ.ಯು) ಮಾಡಿಕೊಂಡು. ಆರೋಪಿ 2 ಬ್ಯಾಂಕ್ ಅಕೌಂಟಿಗೆ ಒಟ್ಟು 14,71,06,035/-ರೂಪಾಯಿಯನ್ನು ಜಮಾ ಮಾಡಿಸಿಕೊಂಡು ಕೇವಲ 10 ಎಕ್ರೆ ಜಮೀನನ್ನು ಮಾತ್ರ ಭರಮಪ್ಪ ಕಂಪನಿಗೆ ಸೇಲ್ ಡೀಡ್ ಮುಖಾಂತರ ಖರೀಧಿಸಿ ಕೊಟ್ಟು ಉಳಿದ ಜಮೀನನ್ನು ಖರೀಧಿಸಿ ನೀಡದೆ ಆರೋಪಿತರು ಫಿರ್ಯಾದಿಯ ಕಂಪನಿಯಿಂದ ಆರೋಪಿತರ ಆಕೌಂಟ್​ಗೆ ಹೆಚ್ಚುವರಿಯಾಗಿ ಜಮಾ ಮಾಡಿಸಿಕೊಂಡ 8,02,35,694/- ರೂಪಾಯಿ ಹಣವನ್ನು ವಾಪಸ್ ಕಂಪನಿ ಅಕೌಂಟಿಗೆ ಜಮಾ ಮಾಡದೆ ಮೂವರು ಆರೋಪಿತರು ಭರಮಪ್ಪ ಕಂಪನಿಗೆ ಮೋಸ ವಂಚನೆ ನಂಬಿಕೆ ದ್ರೋಹ ಮಾಡಿದ್ದಾರೆ.

ಇದನ್ನೂ ಓದಿ : ಹಾವೇರಿಯಲ್ಲಿ ತರಕಾರಿ ವ್ಯಾಪಾರಿಗೆ GST ಸಂಕಷ್ಟ – ಬರೋಬ್ಬರಿ 29 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್!

Btv Kannada
Author: Btv Kannada

Read More