ಜೀ ವಾಹಿನಿಯ ಕನ್ನಡ ಚಾನೆಲ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ದೇಶದ ಮನರಂಜನಾ ಲೋಕದ ಅತಿತೊಡ್ಡ ಸಂಸ್ಥೆಗಳಲ್ಲಿ ಜೀ ಕೂಡ ಒಂದು. ಇದೀಗ ಕನ್ನಡಿಗರಿಗಾಗಿ ಜೀ ಸಂಸ್ಥೆ ಮತ್ತೊಂದು ಹೊಸ ಚಾನಲ್ನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಎಲ್ಲರ ಅಚ್ಚುಮೆಚ್ಚಿನ ಮಾಧ್ಯಮ ಸಂಸ್ಥೆಯಾಗಿರುವ ಜೀ 854 ಮಿಲಿಯನ್ ವೀಕ್ಷಕರನ್ನು 208 ಮಿಲಿಯನ್ ಮನೆಗಳ ಮೂಲಕ ತಲುಪಿ ತನ್ನ ಹೊಸ ಬ್ರ್ಯಾಂಡ್ ಟ್ಯಾಗ್ ಲೈನ್ “ನಿಮ್ಮ ನಂಬಿಕೆಯ Z’ ಅನ್ನುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಇನ್ನು “Z what next” ಮೂಲಕ Zee ಮನೆ ಮನೆ ತಲುಪಲಿದೆ. ಜೀ ವಾಹಿನಿ, ಒಟಿಟಿ, ಸಿನಿಮಾ ನಿರ್ಮಾಣ ಸಂಸ್ಥೆ, ಡಿಶ್ ಕೇಬಲ್, ಸಂಗೀತ ಕ್ಷೇತ್ರದಲ್ಲೂ ಜೀ ತನ್ನ ಚಾಪು ಮೂಡಿಸಿದೆ. ಅಮೆಜಾನ್, ನೆಟ್ಫ್ಲಿಕ್ಸ್ಗಗಳು ವಿದೇಶಿ ಕಂಟೆಂಟ್ ಹಾಗೂ ಭಾರತದ ಅತ್ಯಂತ ದುಬಾರಿ ಸಿನಿಮಾ ಮತ್ತು ಕಂಟೆಂಟ್ಗೆ ಹೆಚ್ಚು ಆದ್ಯತೆ ಕೊಡುತ್ತಿದ್ದರೆ ಜೀ ಪ್ರಾದೇಶಿಕ ಸಿನಿಮಾ ಮತ್ತು ಕಂಟೆಂಟ್ಗೂ ಸ್ಥಾನ, ಗೌರವ ನೀಡುತ್ತಾ ಒಟಿಟಿ ಕ್ಷೇತ್ರದಲ್ಲಿ ತನ್ನದೇ ಗುರುತು ಮೂಡಿಸಿಕೊಂಡಿದೆ.
ಈಗ ಜೀ ಎರಡು ಹೈಬ್ರಿಡ್ ಚಾನೆಲ್ ಗಳನ್ನೂ ಬಿಡುಗಡೆ ಮಾಡಲು ಹೊರಟಿದೆ. ‘Z What’s Next’ ಮೂಲಕ ‘ಜೀ಼ ಪವರ್’ ಮತ್ತು ‘ಜೀ಼ ಸೋನಾರ್ ಬಾಂಗ್ಲಾ’ ಚಾನೆಲ್ಗಳನ್ನು ಜೀ ಸಂಸ್ಥೆ ಲಾಂಚ್ ಮಾಡುತ್ತಿದೆ. ಜೀ ಪವರ್ ಕರ್ನಾಟಕದ ಯುವ ಪೀಳಿಗೆಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಕನ್ನಡ ಹೈಬ್ರಿಡ್ ಚಾನೆಲ್ ಆಗಿದೆ. ಈ ಹೊಸ ಚಾನೆಲ್ ದಿಟ್ಟ, ಯುವಪೀಳಿಗೆಯ ಮಹತ್ವಾಕಾಂಕ್ಷೆಯ ಕಥೆಗಳ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ. ಇದು ಆಗಸ್ಟ್ 2025 ರಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಮಲ್ಟಿಮೀಡಿಯಾ ಅಭಿಯಾನದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಇನ್ನು ಈ ಹೊಸ ಚಾನೆಲ್ ನಲ್ಲಿ ಶುರುವಿಗೆ 5 ಧಾರಾವಾಹಿಗಳು, 1 ದಿನನಿತ್ಯ ಪ್ರಸಾರ ಆಗುವ ರಿಯಾಲಿಟಿ ಶೋ, ಜೊತೆಗೆ ದಿನವೂ ಸಿನೆಮಾ ಪ್ರಸಾರ ಆಗಲಿದೆ.
ಜೀ಼ ಪವರ್ ಬಿಡುಗಡೆಯ ಕುರಿತು ಮಾತನಾಡಿದ ZEELನ ದಕ್ಷಿಣ ಮತ್ತು ಪಶ್ಚಿಮ ವಿಭಾಗದ ಮುಖ್ಯ ಕ್ಲಸ್ಟರ್ ಅಧಿಕಾರಿ ಸಿಜು ಪ್ರಭಾಕರನ್, “ಕರ್ನಾಟಕದಲ್ಲಿ ಕನ್ನಡಿಗರ ಮನದಾಳವನ್ನು ಅರಿತು ಅವರಿಗೆ ತಕ್ಕಂತೆ ಕನ್ನಡದ ಸಂಸ್ಕೃತಿಗೆ ಹೊಂದುವಂತೆ ಕಥೆಗಳನ್ನು ಮಾಡಿ ಜೀ಼ ಕನ್ನಡ ಕಿರುತೆರೆಯ ಲೀಡರ್ ಆಗಿ ಹೊರಹೊಮ್ಮಿದೆ. ಕನ್ನಡಿಗರು ಎಲ್ಲಾ ತರಹದ ಕಂಟೆಂಟ್ ಗಳನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ ಮತ್ತು ನಮಗೆ ಇದರಿಂದ ಮತ್ತಷ್ಟು ಹೆಚ್ಚಿನ ಪ್ರಯತ್ನಕ್ಕೆ ಕೈಹಾಕುವ ಹುಮ್ಮಸ್ಸು ಬರುತ್ತದೆ. ವೀಕ್ಷಕರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಾವು ಡುಯಲ್-ಚಾನೆಲ್ ಸ್ಟ್ರಾಟೆಜಿ ಮಾಡಿದ್ದು ಜೀ಼ ಕನ್ನಡ ಕೌಟುಂಬಿಕ ವೀಕ್ಷಕರನ್ನು ಮನರಂಜಿಸುವುದನ್ನು ಮುಂದುವರೆಸಲಿದ್ದು, ಜೀ಼ ಪವರ್ ಪವರ್ ಫುಲ್ ಕಥೆಗಳ ಮೂಲಕ ಕೌಟುಂಬಿಕ ಪ್ರೇಕ್ಷಕರ ಜೊತೆಗೆ ಯುವ ಪೀಳಿಗೆಯನ್ನು ಮನರಂಜಿಸಲಿದೆ” ಎಂದರು.
ಇದನ್ನೂ ಓದಿ : ಮಾಜಿ ಸಂಸದ ಅನಂತ ಕುಮಾರ್ ಹೆಗಡೆಗೆ ಜೀವ ಬೆದರಿಕೆ – ಕೇಸ್ ದಾಖಲು!







