ಲೋಕಾಯುಕ್ತ ಹೆಸರಲ್ಲಿ ವಂಚನೆ – ಶ್ರೀನಾಥ್ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ವಿಶೇಷ ನ್ಯಾಯಾಲಯ!

ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳ ಹೆಸರಲ್ಲಿ ಕೋಟಿ ಕೋಟಿ ಹಣ ವಸೂಲಿ ಮಾಡಿರುವ ಪ್ರಕರಣ ಸಂಬಂಧ ಶ್ರೀನಾಥ್ ಜೋಶಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಲೋಕಾಯುಕ್ತ ವಿಶೇಷ ನ್ಯಾಯಾಲಯ IPS ಅಧಿಕಾರಿ ಶ್ರೀನಾಥ್ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದೆ.

ಈ ಪ್ರಕರಣ ಸಂಬಂಧ ಮಂಗಳವಾರ ವಿಚಾರಣೆ ಹಾಜರಾಗುವಂತೆ ಶ್ರೀನಾಥ್ ಜೋಶಿ​ ಅವರಿಗೆ ತನಿಖಾಧಿಕಾರಿಯಾಗಿರುವ ಡಿವೈಎಸ್​​​ಪಿ ತಿಪ್ಪೇಸ್ವಾಮಿ ಅವರು ನೋಟಿಸ್ ಜಾರಿ ಮಾಡಿದ್ದರು. ಇದರಂತೆ, ಮಂಗಳವಾರ ಬೆಳಗ್ಗೆ ಜೋಶಿ ಹಾಜರಾಗಿ ಸುಮಾರು 5 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು.

ಲೋಕಾಯುಕ್ತ ಎಸ್ಪಿ-1 ಆಗಿ ಕಾರ್ಯ ನಿರ್ವಹಣೆ ವೇಳೆ ಶ್ರೀನಾಥ್ ಜೋಶಿ ಅವರು ಬಳಸುತ್ತಿದ್ದ ಎರಡು ಮೊಬೈಲ್​ಗಳನ್ನು ಲೋಕಾಯುಕ್ತ ತನಿಖಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ಧರು. ಮೊಬೈಲ್ ಪರಿಶೀಲನೆ ವೇಳೆ ಕೆಲ ಫೋಟೊ ಹಾಗೂ ವಾಟ್ಸ್​ಆ್ಯಪ್ ಸಂದೇಶಗಳು ಡಿಲೀಟ್ ಆಗಿರುವುದು ಕಂಡುಬಂದಿತ್ತು.

ಇದನ್ನೂ ಓದಿ : MLA ಬೈರತಿ ಬಸವರಾಜ್​ಗೆ ಹಿನ್ನಡೆ – ಬಿಕ್ಲು ಶಿವ ಕೇಸ್​ನ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ!

Btv Kannada
Author: Btv Kannada

Read More