ಪೊಲೀಸರು ಹೇಳಿದ್ರೆ ತನಿಖೆಗಾಗಿ SIT ರಚಿಸುತ್ತೇವೆ – ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ವಿಚಾರಕ್ಕೆ ಸಿಎಂ ಸಿದ್ದು ಫಸ್ಟ್ ರಿಯಾಕ್ಟ್!

ಮೈಸೂರು : ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವ ಹೂತಿಟ್ಟಿದ್ದಾರೆ ಅನ್ನೂ ಆರೋಪ ಎಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದೀಗ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮೊದಲ ಬಾರಿ ಪ್ರತಿಕ್ರಿಯಿಸಿ, ಹೂತಿಟ್ಟ ಶವಗಳ ವಿಚಾರದಲ್ಲಿ ಪೊಲೀಸರು ಹೇಳಿದ್ರೆ SIT ರಚಿಸುತ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾತನಾಡಿ, ಶವ ಹೂತಿಟ್ಟ ಪ್ರಕರಣದಲ್ಲಿ SIT ತಂಡ ರಚನೆ ಮಾಡಬೇಕು ಅಂತ ಹೇಳ್ತಿದ್ದಾರೆ. ಪೊಲೀಸರು ಹೇಳಿದ್ರೆ ತನಿಖೆಗೆ SIT ರಚನೆ ಮಾಡುತ್ತೇವೆ, ಶವ ಹೂತಿಟ್ಟ ಆರೋಪಗಳ ಬಗ್ಗೆ ಕಾನೂನಾತ್ಮಕವಾಗಿ ತನಿಖೆ ಮಾಡುತ್ತೇವೆ. ಧರ್ಮಸ್ಥಳದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವ ಒತ್ತಡವೂ ಇಲ್ಲ ಎಂದಿದ್ದಾರೆ.

ಪೊಲೀಸ್​ ಠಾಣೆಗೆ ದೂರು : ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ವ್ಯಕ್ತಿಯೋರ್ವ ತಾನೇ ಶವ ಹೂತಿಟ್ಟುದ್ದು ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ ಎನ್ನಲಾಗ್ತಿದೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನಾಮಧೇಯ ವ್ಯಕ್ತಿಯೊಬ್ಬ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಯಾಗಿ ತನ್ನ ಹೇಳಿಕೆ ಕೂಡ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಯಬೇಕಿದೆ ಎಂದು ಅನೇಕರು ಆಗ್ರಹಿಸಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲೂ ಭಾರೀ ಚರ್ಚೆ ನಡೆಯುತ್ತಿದೆ.

 

ಇದನ್ನೂ ಓದಿ : “ಹಿಕೋರಾ” ಸಿನಿಮಾದ ಸಾಂಗ್ ರಿಲೀಸ್ – ಚಿತ್ರರಂಗದ ಗಣ್ಯರು ಸಾಥ್!

Btv Kannada
Author: Btv Kannada

Read More