Download Our App

Follow us

Home » Uncategorized » ಜಪಾನ್​ ಭೂಕಂಪಕ್ಕೆ 62 ಬ*ಲಿ..!

ಜಪಾನ್​ ಭೂಕಂಪಕ್ಕೆ 62 ಬ*ಲಿ..!

ಜಪಾನ್​ : ಪಶ್ಚಿಮ ಜಪಾನ್‍ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳ ಸರಣಿಯು ಇಂದು ಕನಿಷ್ಠ 62 ಜನರನ್ನು ಬಲಿತೆಗೆದುಕೊಂಡಿದ್ದು, ಕುಸಿದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಚರಣೆ ಭರದಿಂದ ಸಾಗುತ್ತಿದೆ. ಅನೇಕ ಕಟ್ಟಡಗಳು, ವಾಹನಗಳು ಮತ್ತು ದೋಣಿಗಳು ಹಾನಿಗೊಳಗಾಗಿವೆ. ಭೂಕಂಪದ ಅಪಾಯದ ದೃಷ್ಟಿಯಿಂದ ಅಧಿಕಾರಿಗಳು ಮಂಗಳವಾರ ಎಚ್ಚರಿಕೆಯನ್ನು ನೀಡಿದ್ದು, ಕೆಲವು ಪ್ರದೇಶಗಳಲ್ಲಿನ ಜನರು ತಮ್ಮ ಮನೆಗಳಿಂದ ದೂರ ಉಳಿಯುವಂತೆ ಸೂಚಿಸಿದ್ದಾರೆ.

Japan Earthquake: ಜಪಾನ್​ನಲ್ಲಿ ಸರಣಿ ಭೂಕಂಪ: ಸಾವಿನ ಸಂಖ್ಯೆ 62ಕ್ಕೆ ಏರಿಕೆ

ಸೋಮವಾರದಂದು ಇಶಿಕಾವಾ ಪ್ರಿಫೆಕ್ಚರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಸುಮಾರು 100 ಭೂಕಂಪಗಳಲ್ಲಿ 7.6 ತೀವ್ರತೆಯ ಭೂಕಂಪವು ಅತಿ ದೊಡ್ಡದಾಗಿದೆ. ಹೆಚ್ಚಿನ ಸಾವುಗಳು ಇಶಿಕಾವಾದಲ್ಲಿ ಸಂಭವಿಸಿವೆ, ಆದರೆ ಮನೆಗಳು ವ್ಯಾಪಕವಾಗಿ ಹಾನಿಗೊಳಗಾದವು. ಆದಾಗ್ಯೂ, ಉಂಟಾದ ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಸಾಧ್ಯವಾಗಲಿಲ್ಲ. ಕರಾವಳಿ ನಗರಗಳಲ್ಲಿ ಮಣ್ಣಿನ ಪ್ರವಾಹ ಕಾಣಿಸಿಕೊಂಡಿದೆ ಎಂದು ಜಪಾನ್ ಮಾಧ್ಯಮ ವರದಿಗಳು ತಿಳಿಸಿವೆ.

ಇನ್ನೂ ಕೆಲವು ಪ್ರದೇಶಗಳಲ್ಲಿ ನೀರು, ವಿದ್ಯುತ್ ಮತ್ತು ಸೆಲ್‌ಫೋನ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರದ ವಕ್ತಾರ ಯೋಶಿಮಾಸಾ ಹಯಾಶಿ ಹೇಳಿದ್ದಾರೆ. ನಿವಾಸಿಗಳು ತಮ್ಮ ನೆಲಕಚ್ಚಿದ ಮನೆಗಳು ತಮ್ಮ ಭವಿಷ್ಯದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಜಪಾನ್‌ನ ಸೇನೆಯು 1,000 ಸೈನಿಕರನ್ನು ವಿಪತ್ತು ಪ್ರದೇಶಗಳಿಗೆ ರಕ್ಷಣಾ ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ ಎಂದು ಪ್ರಧಾನಿ ಫ್ಯೂಮಿಯೊ ತಿಳಿಸಿದ್ದಾರೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಪದವಿ ಕೋರ್ಸ್​ಗಳ ಶುಲ್ಕ ಶೇ10 % ಏರಿಕೆ..!

Leave a Comment

DG Ad

RELATED LATEST NEWS

Top Headlines

ಬೆಡ್​​ರೂಮ್​​ನಲ್ಲಿ ನಿವೇದಿತಾ ಗೌಡ ಫೋಟೋಶೂಟ್ – ನಿಮಗೆ ಡಿವೋರ್ಸ್ ಆಗಿದೆ ಅನ್ನೋದು ನೆನಪಿದ್ಯಾ? ಎಂದ ನೆಟ್ಟಿಗರು..!

ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಚಂದನ್

Live Cricket

Add Your Heading Text Here