ಬೆಂಗಳೂರು : ಪೀಣ್ಯ-ಜಾಲಹಳ್ಳಿ ಸರ್ವೆ ನಂ.1ರಲ್ಲಿದ್ದ 160 ಕೋಟಿ ರೂ. ಮೌಲ್ಯದ 5 ಎಕರೆ ಖಾಲಿ ಭೂಮಿಯನ್ನು ಅರಣ್ಯ ಇಲಾಖೆ HMT ಕಂಪನಿಯಿಂದ ವಶಕ್ಕೆ ಪಡೆದಿದೆ. ಈಶ್ವರ್ ಖಂಡ್ರೆ– ಹೆಚ್ಡಿಕೆ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದ ಭೂಮಿಯನ್ನು ಇದೀಗ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.
ಹೆಚ್ಎಂಟಿ ವಶದಲ್ಲಿದ್ದ ಪೀಣ್ಯ- ಜಾಲಹಳ್ಳಿ ಸರ್ವೆ ನಂ. 1ರಲ್ಲಿ ಇಂದು ಜೆಸಿಬಿಯೊಂದಿಗೆ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ, HMT ಕಂಪನಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ನ ಒಟ್ಟೂ 599 ಎಕರೆ ಅರಣ್ಯ ಇದರ ಪೈಕಿ ಅರಣ್ಯ ಸ್ವರೂಪದ ಮತ್ತು ಖಾಲಿ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.
1986, 1901ರ ಅಧಿಸೂಚನೆಗಳ ಪ್ರಕಾರ ಭೂಮಿ HMT ವಶದಲ್ಲಿತ್ತು, ಈ ಪ್ರದೇಶ ಅರಣ್ಯ ಎಂದು ಇಲಾಖೆ ಘೋಷಣೆ ಮಾಡಿದ್ದು, ಅರಣ್ಯೇತರ ಉದ್ದೇಶಕ್ಕೆ ಜಮೀನು ಬಳಸಿಕೊಳ್ಳುವಂತಿರಲಿಲ್ಲ.
ಡಿನೋಟಿಫೈ ಮಾಡಲು ಅಧಿಕಾರಿಗಳು ಈ ಹಿಂದೆ ಅನುಮತಿ ಕೇಳಿದ್ದರು. ಆದರೆ ಅನುಮತಿ ಕೊಡದಂತೆ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದರು. ಭೂಮಿ ವಾಪಸ್ ಪಡೆಯುವಂತೆಯೂ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದರು.
ಇದಕ್ಕೆ ಹೆಚ್ಡಿಕೆ HMT ವಶದಲ್ಲಿರುವ ಭೂಮಿ ಬಿಟ್ಟುಕೊಡಲ್ಲ ಎಂದಿದ್ದರು. ಹೆಚ್ಡಿಕೆ HMT ಕಂಪನಿಗೆ ಭೇಟಿ ನೀಡಿ, ಕಾರ್ಖಾನೆ ಪುನಶ್ಚೇತನದ ಬಗ್ಗೆಯೂ ಮಾತ್ನಾಡಿದ್ದರು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಭೂಮಿಯನ್ನು ಮರು ವಶಕ್ಕೆ ಪಡೆದಿದೆ.
ಇದನ್ನೂ ಓದಿ : ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ..!