Download Our App

Follow us

Home » ಅಪರಾಧ » ದರ್ಶನ್​ ರಾಜಾತಿಥ್ಯ ಕೇಸ್​​ನಲ್ಲಿ ಪ್ರತ್ಯೇಕ ಮೂರು FIR ದಾಖಲು..!

ದರ್ಶನ್​ ರಾಜಾತಿಥ್ಯ ಕೇಸ್​​ನಲ್ಲಿ ಪ್ರತ್ಯೇಕ ಮೂರು FIR ದಾಖಲು..!

ಬೆಂಗಳೂರು : ಜೈಲಿನಲ್ಲಿ ದುಡ್ಡು ಇರುವ ವ್ಯಕ್ತಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್​​ ಬಿಂದಾಸ್ ಆಗಿರುವ ಫೋಟೋ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿ ದರ್ಶನ್​ ಮೇಲೆ ಪ್ರತ್ಯೇಕ ಮೂರು FIR ದಾಖಲಾಗಿದೆ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಜೈಲು ಸೂಪರಿಂಟೆಂಡೆಂಟ್ ಕೊಟ್ಟ ದೂರಿನ ಮೇಲೆ ಸದ್ಯ ಮೂರು FIRಗಳು ದಾಖಲಾಗಿದೆ. ಸಿಗರೇಟ್​​ ಕೊಟ್ಟವರ ಮೇಲೆ ಮೊದಲ FIR, ಫೋಟೋ, ವಿಡಿಯೋ ವೈರಲ್ ಮಾಡಿದ್ದಕ್ಕೆ ಮತ್ತೊಂದು ಹಾಗೂ ಸಿಸಿಬಿ ಪೊಲೀಸರ ದಾಳಿ ವೇಳೆ ಕೆಲವು ಬಾಕ್ಸ್‌ಗಳನ್ನು ತಗೊಂಡು ಹೋಗಿದ್ದಕ್ಕೆ ಒಟ್ಟು ಮೂರು ಪ್ರತ್ಯೇಕ ಕೇಸ್‌ಗಳನ್ನು ಪರಪ್ಪನ ಅಗ್ರಹಾರದಲ್ಲಿ ದಾಖಲು ಮಾಡಲಾಗಿದೆ.

ಈ ಮೂರು ಪ್ರಕರಣಗಳಲ್ಲಿ ದರ್ಶನ್​​ ಪ್ರಮುಖ ಆರೋಪಿಯಾಗಿದ್ದು, ವಿಲ್ಸನ್​ ಗಾರ್ಡನ್​​ ನಾಗ, ಕುಳ್ಳ ಸೀನ, ನಾಗರಾಜ್​ ಮೇಲೆ ಕೂಡ FIR ದಾಖಲಾಗಿದೆ. ಮೂರು ಎಫ್​​ಐಆರ್​ಗಳಲ್ಲೂ ಕೂಡ ದರ್ಶನ್ ಆರೋಪಿ ಆಗಿದ್ದು, ಇದರಿಂದ ಅವರಿಗೆ ಜಾಮೀನು ಪಡೆಯುವಲ್ಲಿ ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ : ಜೈಲಿನಲ್ಲಿದ್ದ ನಟ ದರ್ಶನ್​​ಗೆ ವಿಡಿಯೋ ಕಾಲ್ – ಮಾಜಿ ರೌಡಿಶೀಟರ್ ಪುತ್ರ ಪೊಲೀಸ್ ವಶಕ್ಕೆ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here