ಬೆಂಗಳೂರು : ಮಾರ್ಚ್ 2024ರಲ್ಲಿ ನಡೆದಿದ್ದ 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು (KSEAB) ಶೀಘ್ರವೇ ಪ್ರಕಟಿಸಲಿದೆ.
ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಇಂದು (ಏಪ್ರಿಲ್ 3) ಫಲಿತಾಂಶ ಪ್ರಕಟವಾಗಲಿದೆ ಎಂಬ ಮಾಹಿತಿ ಹರಿದಾಡಿತ್ತು. ಈ ಸುದ್ದಿಯನ್ನು “ಅನಧಿಕೃತ ಮತ್ತು ತಪ್ಪು ಮಾಹಿತಿ” ಎಂದು ಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನೂ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದ್ದು, ಫಲಿತಾಂಶ ಶೀಘ್ರದಲ್ಲಿಯೇ ಪ್ರಕಟಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆನ್‌ಲೈನ್ ಮೂಲಕವೇ ಫಲಿತಾಂಶವನ್ನು ವೀಕ್ಷಿಸಲು ಅವಕಾಶವಿದೆ ಎಂದು ಹೇಳಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಕಳೆದ ಮಾರ್ಚ್ 1ರಿಂದ 22ರವರೆಗೆ ರಾಜ್ಯದ 1120ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸಿದೆ. ಸುಮಾರು 7 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದಾರೆ. ಮಾ.25ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗಿತ್ತು. ಮಂಡಳಿಯ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಬಹುತೇಕ ಮೌಲ್ಯಮಾಪನ ಕಾರ್ಯ ಅಂತಿಮ ಘಟ್ಟಕ್ಕೆ ತಲುಪಿದೆ.
ಇನ್ನೊಂದು ವಾರದೊಳಗೆ ಮೌಲ್ಯಮಾಪನ ಪೂರ್ಣ ಮುಗಿದು ಅಂಕಗಳನ್ನು ಕಂಪ್ಯೂಟರೀಕರಣಗೊಳಿಸುವ ಕಾರ್ಯವೂ ಪೂರ್ಣಗೊಳ್ಳಲಿದೆ. ಹೀಗಾಗಿ ಎಲ್ಲ ಅಂದುಕೊಂಡಂತೆ ನಡೆದರೆ ಏಪ್ರಿಲ್ ಎರಡನೇ ವಾರದಲ್ಲಿ ಫಲಿತಾಂಶ ಪ್ರ ಕಟಿಸಲು ಚಿಂತನೆ ನಡೆದಿದೆ ಎಂದು ಇಲಾಖೆ ಹೇಳಿದೆ. ಏ.10 ಅಥವಾ ನಂತರದ ಒಂದೆರಡು ದಿನಗಳಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ಫಲಿತಾಂಶ ನೋಡುವುದು ಹೇಗೆ ?
https://karresults.nic.in ವೆಬ್‌ಸೈಟ್ ಕ್ಲಿಕ್ ಮಾಡಿ
ದ್ವಿತೀಯ ಪಿಯುಸಿ ಫಲಿತಾಂಶ ಎನ್ನುವ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ರೋಲ್ ನಂಬರ್ ಅನ್ನು ನಮೂದಿಸಿ
ನಿಮ್ಮ ವಿಷಯ ಯಾವುದು ಎನ್ನುವುದನ್ನು ತಿಳಿಸಿ
ಅಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಎನ್ನುವ ವಿಷಯ ಬರಲಿದೆ
ಅದರ ಮೇಲೆ ನಿಮ್ಮ ವಿಷಯ ಕ್ಲಿಕ್ ಮಾಡಿ
ನಿಮ್ಮ ಫಲಿತಾಂಶ ಸಿಗಲಿದೆ
ಇದನ್ನೂ ಓದಿ : ಚಿಕ್ಕಬಳ್ಳಾಪುರ ಬಂಡಾಯಕ್ಕೆ ಮದ್ದು ಅರೆದ ಅಮಿತ್ ಶಾ : ಕೊನೆಗೂ ಸುಧಾಕರ್ ಪರ ಕೆಲಸ ಮಾಡಲು ಒಪ್ಪಿದ ಶಾಸಕ ವಿಶ್ವನಾಥ್..!