ಗೋಲ್ಡ್ ಸ್ಕ್ಯಾಮ್​ನಲ್ಲಿ ರಾಜ್ಯದ ಸೆಲೆಬ್ರಿಟಿ ಸ್ವಾಮೀಜಿ ಕೈವಾಡ! ಯಾವುದೇ ಕ್ಷಣದಲ್ಲಿ ಅರೆಸ್ಟ್?

ಬೆಂಗಳೂರು : ನಟಿ ರನ್ಯಾ ರಾವ್ ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡ್ತಿದೆ. ಈ ಪ್ರಕರಣವನ್ನು ಡಿಆರ್‌ಐ, ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಗೋಲ್ಡ್​ ಸ್ಮಗ್ಲಿಂಗ್ ಪ್ರಕರಣಕ್ಕೆ ಪ್ರಭಾವಿ ರಾಜಕಾರಣಿಗಳ ನಂಟಿದೆ ಅನ್ನೋ ಶಾಕಿಂಕ್ ವಿಚಾರ ಈಗಾಗಲೇ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಕರಾವಳಿ ಮೂಲದ ಭಾರೀ ಫೇಮಸ್ ಸ್ವಾಮೀಜಿಯೊಬ್ಬರು ಈ ಕೇಸ್​ನ ಕಿಂಗ್​ಪಿನ್ ಎಂಬ ಸುದ್ದಿ ಕೇಳಿಬರುತ್ತಿದೆ.

ಈ ಸ್ವಾಮೀಜಿಯೇ ರನ್ಯಾಳನ್ನು ಮಂತ್ರಿಗೆ ಪರಿಚಯಿಸಿದ್ದರು. 2 ವರ್ಷದ ಹಿಂದೆ ಸ್ವಾಮೀಜಿ ದುಬೈಗೆ ಶಿಫ್ಟ್ ಆಗಿದ್ದು, ಈಗ ಸ್ವಾಮೀಜಿಯ ಬ್ಯುಸಿನೆಸ್, ಆಫೀಸ್ ಎಲ್ಲಾ ದುಬೈನಲ್ಲೇ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲಿಂದಲೇ ಇಲ್ಲಿನ ವ್ಯವಹಾರ ನೋಡಿಕೊಳ್ತಿರುವ ಸ್ವಾಮೀಜಿ, ರನ್ಯಾಗೆ ಪ್ರತಿಬಾರಿಯೂ ಚಿನ್ನ ಕೊಡ್ತಿದ್ರು ಎನ್ನಲಾಗಿದೆ. ಅದನ್ನು ರನ್ಯಾ ಬೆಂಗಳೂರಿಗೆ ತಂದು ಅರ್ಧ ಚಿನ್ನವನ್ನು ರಾಜಕಾರಣಿಗಳಿಗೆ ನೀಡ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು ಉಳಿದ ಅರ್ಧ ಚಿನ್ನವನ್ನು ಗೋಲ್ಡ್​ ವ್ಯಾಪಾರಿಗಳಿಗೆ ಕೊಡ್ತಿದ್ರು, ಮಂತ್ರಿ ಸೇರಿ ರಾಜಕಾರಣಿಗಳು ಬ್ಲ್ಯಾಕ್​ಮನಿ ಗೋಲ್ಡ್​ಗೆ ಕನ್ವರ್ಟ್ ಮಾಡ್ತಿದ್ರು. ಕ್ಯಾಶ್​ ಇಟ್ಕೊಳ್ಳಕ್ಕಾಗಲ್ಲ ಅಂತ ಗೋಲ್ಡ್​ ಇನ್ವೆಸ್ಟ್​ಮೆಂಟ್ ಮಾಡ್ತಿದ್ದರು. ಈವರೆಗೆ ಸ್ವಾಮೀಜಿ ಹಾಗೂ ಮಂತ್ರಿ ಸೇರಿ ನೂರಾರು ಕೆ ಜಿ ಚಿನ್ನವನ್ನು ಬೆಂಗಳೂರಿಗೆ ತಂದಿದ್ದಾರೆ. 100 ಕೆಜಿ ಚಿನ್ನವನ್ನು ಒಂದೇ ಕಡೆ ಇಟ್ಟಿರೋ ಬಗ್ಗೆ CBI ಶೋಧ ನಡೆಸಿದ್ದು, ತನಿಖೆ ವೇಳೆ CBI, DRI ಅಧಿಕಾರಿಗಳಿಗೆ ದಂಧೆಯ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.

ಸ್ವಾಮೀಜಿಯ ಬೆಂಗಳೂರು ನಿವಾಸದ ಮೇಲೂ CBI ಸೈಲೆಂಟಾಗಿ ರೇಡ್ ಮಾಡಿ ದಾಖಲೆಗಳನ್ನು ಕೊಂಡೊಯ್ದಿದ್ದಾರೆ.
ಇನ್ನು ಮುಂದುವರೆದ ತನಿಖೆಯ ಭಾಗವಾಗಿ Red Corner ನೋಟಿಸ್ ಕೊಟ್ಟು CBI ಟೀಂ ದುಬೈಗೆ ಹೊರಡಲಿದೆ. ಸ್ವಾಮೀಜಿ ಅರೆಸ್ಟ್ ಆಗ್ತಿದ್ದಂತೆಯೇ ಆ ಪ್ರಭಾವಿ ಮಂತ್ರಿ ಕೂಡಾ ಅರೆಸ್ಟ್ ಆಗುವ ಸಾಧ್ಯತೆಯಿದೆ.

Btv Kannada
Author: Btv Kannada

Leave a Comment

Read More

Read More