ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ತಂದೆಗೂ ಸಂಕಷ್ಟ ತಂದಿಟ್ಟ ರನ್ಯಾ – ಐಪಿಎಸ್ ರಾಮಚಂದ್ರ ರಾವ್​​ಗೆ ತನಿಖೆ ಬಿಸಿ!

ಬೆಂಗಳೂರು : ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಪುತ್ರಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್​​ ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಸದ್ಯ ಡಿಆರ್‌ಐ ವಶದಲ್ಲಿದ್ದ ರನ್ಯಾ ರಾವ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿದೆ. ಈ ಪ್ರಕರಣದಲ್ಲಿ ಸಿಬಿಐ ಸಹ ತನಿಖೆ ಕೈಗೊಂಡಿದ್ದು, ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.

ಇದೀಗ ರನ್ಯಾ ರಾವ್ ತಂದೆ ಕೆ.ರಾಮಚಂದ್ರ ರಾವ್‌ಗೂ ಈ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ರನ್ಯಾ ರಾವ್ ತಂದೆ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

IPS ಅಧಿಕಾರಿ ಕೆ. ರಾಮಚಂದ್ರ ರಾವ್ ಕುಟುಂಬಕ್ಕೆ ಇರುವ ಶಿಷ್ಟಾಚಾರದ ನಿಯಮವನ್ನು ದುರ್ಬಳಕೆ ಮಾಡಿಕೊಂಡು ರನ್ಯಾ ರಾವ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ಇಲ್ಲದೇ ಬರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಡಿಜಿಪಿ ರಾಮಚಂದ್ರರಾವ್ ರವರನ್ನು ತನೆಖೆ ನಡೆಸುವುದು ಅಗತ್ಯವೆಂದು ರಾಜ್ಯ ಸರ್ಕಾರ ಪರಿಗಣಿಸಿ ಅವರ ವಿರುದ್ದ ತನಿಖೆಗೆ ಆದೇಶಿಸಿದೆ.

ಒಂದು ವಾರದಲ್ಲಿ ತನಿಖೆ ನಡೆಸಿ ವರದಿಗೆ ಸೂಚನೆ : ಕರ್ನಾಟಕ ಸರ್ಕಾರ ಕೆ. ರಾಮಚಂದ್ರ ರಾವ್ ವಿರುದ್ಧ ತನಿಖೆಗೆ ಆದೇಶಿಸಿದ್ದು, ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಿದೆ. ಒಂದು ವಾರದಲ್ಲಿ ವರದಿ ನೀಡಬೇಕು. ಹಾಗೂ ತನಿಖೆಗೆ ಅಗತ್ಯವಿರುವ ದಾಖಲೆಗಳನ್ನು ಮತ್ತು ನೆರವನ್ನು ನೀಡಲು ಡಿಜಿಐಜಿಪಿ ಅಲೋಕ್ ಮೋಹನ್​ ಅವರಿಗೆ ಸರ್ಕಾರ ಸೂಚಿಸಿದೆ.

Btv Kannada
Author: Btv Kannada

Leave a Comment

Read More

Read More