ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಸದ್ಯ ನಾಯಾಂಗ ಬಂಧನದಲ್ಲಿದ್ದಾರೆ. ಈ ಕೇಸ್‌ನಲ್ಲಿ ದಿನೇದಿನೇ ಬಗೆದಷ್ಟು ಮಾಹಿತಿಗಳು ಬಯಲಾಗುತ್ತಿವೆ. ಇದೀಗ ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ ಎರಡೇ ದಿನದಲ್ಲಿ 10 ಲಕ್ಷ ಹಣ ಸಂದಾಯವಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
4 ಲಕ್ಷ, 1 ಲಕ್ಷ, 5 ಲಕ್ಷದಂತೆ ಒಟ್ಟು 10 ಲಕ್ಷ ಹಣ ಇದ್ದಕ್ಕಿದ್ದಂತೆ ರನ್ಯಾ ಅಕೌಂಟ್‌ಗೆ ಸಂದಾಯವಾಗಿದೆ. ಓಂಕಾರ ಕೋ ಆಪರೇಟಿವ್ ಬ್ಯಾಂಕ್ ಅಕೌಂಟ್‌ನಿಂದ ಟ್ರಿನಿಟಿಯ ಕೆನರಾ ಬ್ಯಾಂಕ್‌ನಲ್ಲಿರುವ ರನ್ಯಾ ಅಕೌಂಟ್‌ಗೆ 10 ಲಕ್ಷ ಹಣ ಸಂದಾಯವಾಗಿದೆ. 2022ರ ಏ.27 ಹಾಗೂ 28ರಂದು ಹಣ ಸಂದಾಯ ಆಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಹಾಗಾಗಿ ಹೆಸರಿಗಷ್ಟೇ ಕ್ರಿಯೇಟ್ ಮಾಡಿದ್ದ ಅಕೌಂಟ್‌ಗೆ ಹಣ ಹಾಕಿದ್ದು ಯಾರು? ಎಂಬ ತನಿಖೆಯನ್ನು ಡಿಐಆರ್ ಅಧಿಕಾರಿಗಳು ಶುರು ಮಾಡಿದ್ದಾರೆ.
ಸದ್ಯ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್‌ಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಮಾ.24 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಸದ್ಯ ರನ್ಯಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಾಳೆಯುತ್ತಿದ್ದಾರೆ.
