ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಾ ಗೌಡ ಮಧ್ಯೆ ಕೋಟಿ ಕೋಟಿ ಡೀಲ್ ಆಗಿದೆ ಎನ್ನಲಾಗ್ತಿದೆ. ಐಶ್ವರ್ಯಾ ಗೌಡ ಅವರು ಶಾಸಕ ವಿನಯ್ ಕುಲಕರ್ಣಿ ರಾಜಕೀಯ ಭವಿಷ್ಯ ಮುಗಿಸಲು ಸಂಚು ಮಾಡಿದ್ರಾ ಅನ್ನೋ ಶಂಕೆ ವ್ಯಕ್ತವಾಗಿದೆ.

ಗೋಲ್ಡ್ ಕ್ವೀನ್ ಐಶ್ವರ್ಯಾ ಅವರು ವಿನಯ್ ಕುಲಕರ್ಣಿಗೆ 40 ಕೋಟಿ ರೂಪಾಯಿ ಕೊಡ್ಬೇಕಾ ಅನ್ನೋ ಪ್ರಶ್ನೆ ಎದ್ದಿದೆ. ವಿನಯ್ ಕುಲಕರ್ಣಿ ಭವಿಷ್ಯ ಮುಗಿಸಲು ಬಸವರಾಜ್ ಮುತ್ತಗಿ ಎಂಬುವವರು ಐಶ್ವರ್ಯಾ ಗೌಡಗೆ ಮಾತು ಕೊಟ್ಟಿದ್ರಾ ಅನ್ನೋ ಸ್ಫೋಟಕ ಅಂಶ ಹೊರ ಬಿದ್ದಿದೆ. ರಾಜಕಾರಣಿಯೊಬ್ಬರ ಹತ್ತಿರ ನೀನು ನನಗೆ 15 ಕೋಟಿ ರೂಪಾಯಿ ಕೊಡಿಸು, ನಾನು ಮಾಫಿ ಸಾಕ್ಷಿ ಆಗುತ್ತೇನೆ, ವಿನಯ ಕುಲಕರ್ಣಿ ಭವಿಷ್ಯ ಮುಗಿಸ್ತೇನೆ. ವಿನಯ್ ಕುಲಕರ್ಣಿಯನ್ನು ಕೊಲೆ ಕೇಸಿನಲ್ಲಿ ಸಿಕ್ಕಿಸ್ತೇನೆ ಅಂತಾ ಬಸವರಾಜ್ ಮುತ್ತಗಿ ಅವರು ಐಶ್ವರ್ಯಾ ಗೌಡಗೆ ಮಾತು ಕೊಟ್ಟಿದ್ರು ಎಂಬ ಮಾಹಿತಿ ಕೋರ್ಟ್ಗೆ ನೀಡಲಾಗಿದೆ.

ಬಸವರಾಜ ಮುತ್ತಗಿ ಅವರು ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿದ್ದು ಈ ಕೇಸಲ್ಲಿ ಮುತ್ತಗಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸೋ ಅರ್ಜಿ ಕುರಿತ ವಾದದ ವೇಳೆ ಈ ಬಗ್ಗೆ ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.

ಬಸವರಾಜ ಮುತ್ತಗಿ ಹಾಗೂ ಐಶ್ವರ್ಯಾ ಮಾತುಕತೆಯ ಬಗ್ಗೆ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು ಹೈಕೋರ್ಟ್ಗೆ ಸಾಕ್ಷಿ ಕೊಟ್ಟಿದ್ದಾರೆ. ಇಬ್ಬರ ನಡುವಿನ ಮಾತುಕತೆಗೆ ಸಂಬಂಧಿಸಿದ ಪೆನ್ಡ್ರೈವ್ ಇದೆ ಎಂದಿದ್ದಾರೆ. ಇದಕ್ಕೆ ವಿರುದ್ಧವಾಗಿ ಪ್ರತಿವಾದಿ ವಕೀಲರು ಅದು ಮಾಫಿ ಸಾಕ್ಷಿ ಸಂಬಂಧದ ಮಾತುಕತೆ ಅಲ್ಲ ಎಂದಿದ್ದಾರೆ. ಉದ್ಯಮಿ ಐಶ್ವರ್ಯ ಗೌಡ ಅವರು ವಿನಯ ಕುಲಕರ್ಣಿಗೆ 40 ಕೋಟಿ ರೂಪಾಯಿ ಕೊಡಬೇಕು. ಅದನ್ನು ವಸೂಲಿ ಮಾಡಲು ಬಸವರಾಜ ಮುತ್ತಗಿಗೆ ಹೇಳಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಮಾತುಕತೆಯೇ ಹೊರತು, ಮಾಫಿ ಸಾಕ್ಷಿ ಸಂಬಂಧ ಇಲ್ಲ ಎಂದು ಪ್ರತಿವಾದಿ ವಕೀಲರಿಂದ ಹೈಕೋರ್ಟ್ಗೆ ಮತ್ತೊಂದು ಪೆನ್ಡ್ರೈವ್ ಸಲ್ಲಿಕೆ ಮಾಡಲಾಗಿದೆ.

ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ನ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಪೀಠವು ಸೋಮವಾರಕ್ಕೆ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ : https://btvkannada.com/2025/03/11/btv-impact-corrupt-rto-officer-suspend/
