10 ಮಿಲಿಯನ್​ ವ್ಯೂಸ್​.. ಸಾವಿರಾರು ಲೈಕ್ಸ್​, ಕಮೆಂಟ್ಸ್, ಶೇರ್ – BTV ಬಿತ್ತರಿಸಿದ್ದ ಮಂಡ್ಯ RTO ಅಧಿಕಾರಿಗಳ ಲಂಚಾವತಾರ ವಿಡಿಯೋ ಸಂಚಲನ!

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಜಸ್ಟ್​ ಒಂದೇ ಒಂದು ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ. ಪರಮ ಭ್ರಷ್ಟ ಅಧಿಕಾರಿಗಳ ವಿಡಿಯೋ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಜನ ಸಾಮಾನ್ಯರು ಛೀ..ಥೂ ಅಂತಾ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಮಂಡ್ಯದಲ್ಲಿ RTO ಅಧಿಕಾರಿಗಳು ನಡು ರಸ್ತೆಯಲ್ಲೇ ಕೇವಲ 100 ರೂಪಾಯಿಗೆ ರಾಜ್ಯದ ಮಾನ ಹರಾಜು ಹಾಕಿದ್ದ ವಿಡಿಯೋವನ್ನು ನಿಮ್ಮ BTV ವರದಿ ಮಾಡಿತ್ತು. BTV ವರದಿ ಬೆನ್ನಲ್ಲೇ ಈ ಲಂಚದ ವಿಡಿಯೋ ಸಾಮಾಜಿಕ ಜಾಲತಾಣ ಸೇರಿ ರಾಜ್ಯದ ಎಲ್ಲಡೆಯೂ ಭಾರೀ ವೈರಲ್ ಆಗಿದೆ.

ಮಂಡ್ಯದ ಪಾಂಡವಪುರದ ಬಳಿ ಮಹಿಳಾ RTO ಅಧಿಕಾರಿ ವಾಣಿಶ್ರೀ ನೇತೃತ್ವದಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿಗಳು ತಮಿಳುನಾಡು ಸೇರಿ ಹೊರ ರಾಜ್ಯಗಳ ಲಾರಿ ಚಾಲಕರಿಂದ 100, 200 ರೂಪಾಯಿಯನ್ನು ಬಿಡದೇ ಚಿಲ್ಲರೆ ವ್ಯಾಪಾರದಂತೆ ವಸೂಲಿ ಮಾಡ್ತಿದ್ರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ ಸೇರಿ ಎಲ್ಲಾ ಪ್ಲಾಟ್​ ​ಫಾರ್ಮ್​ಗಳಲ್ಲಿ ಬರೋಬ್ಬರಿ 10 ಮಿಲಿಯನ್​ ವೀಕ್ಷಣೆ ಪಡೆದಿದೆ.

BTV ವಾಹಿನಿಯಲ್ಲಿ 3 ಮಿಲಿಯನ್ ವ್ಯೂಸ್ ಆಗಿದ್ದು, 33 ಸಾವಿರ ಲೈಕ್ಸ್, 3 ಸಾವಿರಕ್ಕೂ ಹೆಚ್ಚು ಕಮೆಂಟ್ಸ್, 11 ಸಾವಿರಕ್ಕೂ ಹೆಚ್ಚು ಬಾರಿ ಶೇರ್​​ ಆಗಿದ್ದು ರಾಜ್ಯಾದ್ಯಂತ 10 ಮಿಲಿಯನ್​ ವೀಕ್ಷಣೆ ಪಡೆದಿದೆ. ಭಾರೀ ಸಂಚಲನ ಸೃಷ್ಟಿಸಿದ ಈ ವಿಡಿಯೋ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೂ ನೋಡಿದ್ದು ವಿಡಿಯೋ ಬಗ್ಗೆ ಹಿರಿಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದಿದ್ದಾರೆ. ಬಳಿಕ ಮಂಡ್ಯದ ಭ್ರಷ್ಟ ಮಹಿಳಾ RTO ಅಧಿಕಾರಿ ವಾಣಿಶ್ರೀ ಅವರ ವಿರುದ್ಧ ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದೀಗ ಸಾರಿಗೆ ಇಲಾಖೆ ಆಯುಕ್ತರು RTO ಅಧಿಕಾರಿ ವಾಣಿಶ್ರೀ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

BTV ವರದಿಯ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಮತ್ತು ಸಾರಿಗೆ ಸಚಿವರು, ಮಂಡ್ಯದ ಭ್ರಷ್ಟ ಮಹಿಳಾ RTO ಅಧಿಕಾರಿ ವಾಣಿಶ್ರೀ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ವಾಣಿಶ್ರೀ ಅವರು ಪಾಂಡವಪುರದ ಬಳಿ ಹೊರ ರಾಜ್ಯದ ವಾಹನಗಳನ್ನು ಅಡ್ಡಗಟ್ಟಿ ಹಾಡಹಗಲೇ ರಸ್ತೆಯಲ್ಲೇ ಲಂಚ ಪಡೆಯುತ್ತಿದ್ದರು. ಲಾರಿ ಚಾಲಕರ ಬಳಿ 100, 200 ರೂ. ವಸೂಲಿ ಮಾಡ್ತಿದ್ದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸುದೀರ್ಘವಾಗಿ BTV ವರದಿ ಮಾಡಿತ್ತು. ಅದರಂತೆ ಇಲಾಖೆಯ ವಿಚಾರಣೆ ಕಾಯ್ದಿರಿಸಿ ವಾಣಿಶ್ರೀ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಡ್ಯದಿಂದ ಧಾರವಾಡಕ್ಕೆ ವರ್ಗಾವಣೆ ಮಾಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಅಕ್ರಮ ಬಯಲು ಮಾಡುವ BTV ಇದೀಗ ಮಹಿಳಾ RTO ಅಧಿಕಾರಿ ವಾಣಿಶ್ರೀ ಅವರ ಲಂಚಾವತಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಯಾರೇ ಆಗಲಿ ಲಂಚದ ಹಣಕ್ಕಾಗಿ ಬಡವರು, ನಿರ್ಗತಿಕರ ಪ್ರಾಣ ಹಿಂಡುವ ಸರ್ಕಾರಿ ಅಧಿಕಾರಿಗಳು ಅಥವಾ ಯಾವುದೇ ಸಿಬ್ಬಂದಿ ಇದ್ರೂ ಅವರ ವಿರುದ್ಧ BTV ಸಮರ ಸಾರೋದಂತು ಫಿಕ್ಸ್.

Btv Kannada
Author: Btv Kannada

Leave a Comment

Read More

Read More