ನೇಪಾಳದ ಕಠ್ಮಂಡು ಬಳಿ ಇಂದು ಮುಂಜಾನೆ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ನಿದ್ದೆಯಲ್ಲಿದ್ದ ಜನರಿಗೆ ಭೂಮಿ ನಡುಗಿದ ಅನುಭವವಾಗಿದೆ.
ಒಂದು ಬಿಹಾರ ಗಡಿಯ ಬಳಿ ಸಂಭವಿಸಿದರೆ, ಮತ್ತೊಂದು ಕಠ್ಮಂಡು ಬಳಿ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿದ್ದು, ಬೆಳಗಿನ ಜಾವ 2.30ರ ಸುಮಾರಿಗೆ ಸಂಭವಿಸಿದೆ. ಭೂಕಂಪದಿಂದಾಗಿ, ಪಶ್ಚಿಮ ಬಂಗಾಳ ಮತ್ತು ಬಿಹಾರದ ಸಿಲಿಗುರಿಯ ನೆಲವೂ ನಡುಗಿತ್ತು. ಇನ್ನು ಪಾಟ್ನಾ ಮತ್ತು ಮುಜಫರ್‌ಪುರ ಸೇರಿದಂತೆ ಬಿಹಾರದ ಹಲವು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ.
ಭೂಕಂಪದಿಂದ ಯಾವುದೇ ಹಾನಿ ಅಥವಾ ಕಾರಣದ ಬಗ್ಗೆ ತಿಳಿದುಬಂದಿಲ್ಲ. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ ಪ್ರಕಾರ, ಕಠ್ಮಂಡುವಿನಿಂದ 65 ಕಿಮೀ ಪೂರ್ವಕ್ಕೆ ಸಿಂಧುಪಾಲ್‌ಚೌಕ್ ಜಿಲ್ಲೆಯ ಕೊಡರಿ ಹೆದ್ದಾರಿಯಲ್ಲಿ 6.1 ರಿಕ್ಟರ್ ಮಾಪಕದಲ್ಲಿ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ ತಿಳಿಸಿದೆ.

Author: Btv Kannada
Post Views: 188