66 ಕೋಟಿ ಭಕ್ತರ ಪುಣ್ಯ ಸ್ನಾನ.. ಶತಮಾನದ ಮಹಾಕುಂಭಮೇಳಕ್ಕೆ ತೆರೆ!

ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆದ ಮಹಾ ಕುಂಭಮೇಳ ಜಗತ್ತಿನ ಗಮನ ಸೆಳೆದಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಭಾರತ ಮಾತ್ರವಲ್ಲದೆ, ಪ್ರಪಂಚದಾದ್ಯಂತದಿಂದ ಕೋಟ್ಯಂತರ ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಜನವರಿ 13ರಿಂದ ಶುರುವಾಗಿ ಸತತ ಆರು ವಾರಗಳ ನಂತರ ಅಂದರೆ 45 ದಿನಗಳ ನಂತರ ಮಹಾಶಿವರಾತ್ರಿ ಪ್ರಯುಕ್ತ ಅಮೃತಸ್ನಾನದೊಂದಿಗೆ ಕೊನೆಗೊಳ್ಳಲಿದೆ.

ಬರೋಬ್ಬರಿ 144 ವರ್ಷಗಳ ನಂತರ ನಡೆದ ಮಹಾಕುಂಭಮೇಳಕ್ಕೆ ಭಕ್ತಾದಿಗಳಿಂದ ನಿರೀಕ್ಷೆ ಮೀರಿ ಪ್ರೋತ್ಸಾಹ ದೊರೆಯಿತು. 40 ಕೋಟಿ ಜನರ ಆಗಮನದ ನಿರೀಕ್ಷೆಯಿಟ್ಟಿದ್ದ ಆಡಳಿತ ಮಂಡಳಿಯ ಲೆಕ್ಕಾಚಾರವೇ ತಲೆಕೆಳಗಾಗುವಂತೆ ಮಾಡಿತ್ತು. ಇಂದು ಒಂದೇ ದಿನ ಮಹಾ ಕುಂಭಮೇಳದಲ್ಲಿ 1.44 ಕೋಟಿ ಭಕ್ತಾದಿಗಳು ತೀರ್ಥಸ್ನಾನ ಮಾಡಿದ್ದಾರೆ.

ಇಲ್ಲಿಯವರೆಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರಪತಿ ದ್ರೌಪದಿ ಮುರ್ಮು, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಮುಕೇಶ್ ಅಂಬಾನಿ, ಉದ್ಯಮಿಗಳು, ನಟ ನಟಿಯರು ಮತ್ತು ವಿವಿಐಪಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಇಲ್ಲಿಯವರೆಗೆ 66 ಕೋಟಿಗೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.

ಇಂದು ಶಿವರಾತ್ರಿ, ಶಿವ ಹಾಗೂ ಪಾರ್ವತಿಯ ಸ್ಮರಣಾರ್ಥವಾಗಿ ವಿಶೇಷ ದಿನದಂದ ಅಮೃತ ಸ್ನಾನದೊಂದಿಗೆ ಕೊನೆಗೊಳ್ಳಲಿದೆ.

Btv Kannada
Author: Btv Kannada

Leave a Comment

Read More

Read More