Download Our App

Follow us

Home » ಸಿನಿಮಾ » ಬಿಗ್​ಬಾಸ್ ಅಖಾಡಕ್ಕೆ ಬಂದಾಯ್ತು 17 ಕಂಟೆಸ್ಟೆಂಟ್ಸ್.. ಯಾರು ಸ್ವರ್ಗಕ್ಕೆ? ಯಾರು ನರಕಕ್ಕೆ? ಇಲ್ಲಿದೆ ಲಿಸ್ಟ್..!

ಬಿಗ್​ಬಾಸ್ ಅಖಾಡಕ್ಕೆ ಬಂದಾಯ್ತು 17 ಕಂಟೆಸ್ಟೆಂಟ್ಸ್.. ಯಾರು ಸ್ವರ್ಗಕ್ಕೆ? ಯಾರು ನರಕಕ್ಕೆ? ಇಲ್ಲಿದೆ ಲಿಸ್ಟ್..!

ಬಿಗ್‌ಬಾಸ್ ಕನ್ನಡ 11ಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ರಂಗು ರಂಗಿನ ಶೋ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದೆ. ಯಾರೆಲ್ಲಾ ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸ್ವರ್ಗ ಹಾಗೂ ನರಕ ಎಂದು ಮನೆಯನ್ನು ಎರಡು ಭಾಗ ಮಾಡಿ ಸ್ಪರ್ಧಿಗಳನ್ನು ವಿಭಾಗಿಸಿ ಮನೆಯೊಳಗೆ ಕಳುಹಿಸಲಾಗಿದೆ. ಈ ಬಾರಿ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಹೋಗಬಹುದು ಎನ್ನುವ ಬಗ್ಗೆ ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿತ್ತು. ಅದರಲ್ಲಿ ಒಂದಷ್ಟು ಜನ ದೊಡ್ಮನೆಗೆ ಹೋಗುವ ಬಗ್ಗೆ ವೀಕ್ಷಕರು ಗೆಸ್ ಮಾಡಿದ್ದರು. ಇನ್ನುಳಿದಂತೆ ಬೇರೆ ಬೇರೆ ಕ್ಷೇತ್ರಗಳ ಸ್ಪರ್ಧಿಗಳನ್ನು ಕಲರ್ಸ್ ಕನ್ನಡ ಹುಡುಕಿ ತಂದಿದೆ.

17 ಸ್ಪರ್ಧಿಗಳಲ್ಲಿ ಯಾರು ಸ್ವರ್ಗಕ್ಕೆ? ಯಾರು ನರಕಕ್ಕೆ?

ಭವ್ಯಾ ಗೌಡ (ಮನೆ – ಸ್ವರ್ಗ) : ಬಿಗ್‌ ಬಾಸ್‌ ಮನೆಗೆ ಎಂಟ್ರಿ ಪಡೆದ ಮೊದಲ ಸ್ಪರ್ಧಿ. ಗೀತಾ ಸೀರಿಯಲ್‌ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡು ಬಿಗ್‌ ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಯಮುನಾ ಶ್ರೀನಿಧಿ (ಮನೆ – ಸ್ವರ್ಗ) : ಕನ್ನಡದಲ್ಲಿ 10ಕ್ಕೂ ಅಧಿಕ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಕನ್ಯಾಕುಮಾರಿ ಸೀರಿಯಲ್‌ನಲ್ಲಿ ನಾಯಕನ ಅಮ್ಮನ ಪಾತ್ರಧಾರಿಯಾಗಿ, ಕಮಲಿ ಸೀರಿಯಲ್‌ನಲ್ಲಿ ಕಮಲಿ ತಾಯಿ ಗೌರಿಯಾಗಿ ನಟಿಸಿದ್ದರು. ಬಿಗ್‌ ಮನೆಯ 2ನೇ ಸರ್ಧಿಯಾಗಿ ಎಂಟ್ರಿ ಪಡೆದುಕೊಂಡಿದ್ದಾರೆ.

ಧನರಾಜ್‌ ಆಚಾರ್‌ (ಮನೆ – ಸ್ವರ್ಗ) : ಯೂಟ್ಯೂಬರ್‌ ಧನರಾಜ್‌ ಆಚಾರ್‌ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕಂಟೆಂಟ್‌ಗಳ ಮೂಲಕವೇ ಜನಪ್ರಿಯರಾದವರು. ಬಿಗ್‌ ಬಾಸ್‌ ವೇದಿಕೆಯಲ್ಲಿ ಬಿಗ್‌ ಬಾಸ್‌ ಕುರಿತಾಗಿಯೇ ಅವರು ಮಾಡಿದ ಕಂಟೆಂಟ್‌ ಬಗ್ಗೆ ಸುದೀಪ್‌ ಸಖತ್‌ ಆಗಿಯೇ ಚಮಕ್‌ ನೀಡಿದರು. ಮೂರನೇ ಸ್ಪರ್ಧಿಯಾಗಿ ಬಿಗ್‌ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ.

ಗೌತಮಿ ಜಾಧವ್‌ (ಮನೆ – ಸ್ವರ್ಗ) : ಜೀ ಕನ್ನಡದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡ ಸತ್ಯ  ಸೀರಿಯಲ್‌ನಲ್ಲಿ ಟಾಮ್‌ ಬಾಯ್‌ ಪಾತ್ರದಲ್ಲಿ ನಟಿಸಿದ್ದ ತಾರೆ. ಸೋಶಿಯಲ್‌ ಮೀಡಿಯಾದಲ್ಲೂ ಖ್ಯಾತಿ ಉಳಿಸಿಕೊಂಡಿದ್ದಾರೆ. ಕಿರುತೆರೆ ಪ್ರಿಯರಿಗೆ ಸತ್ಯ ಎನ್ನುವ ಹೆಸರಲ್ಲೇ ಫೇಮಸ್‌ ಆಗಿದ್ದಾರೆ.

ಅನುಷಾ ರೈ (ಮನೆ – ನರಕ) : ಬಿಗ್‌ ಬಾಸ್ ಮನೆಯಲ್ಲಿ ನರಕಕ್ಕೆ ಹೋದ ಮೊದಲ ಸ್ಟಾರ್‌. ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಟಿ. ಮೂಲತಃ ತುಮಕೂರಿನವರು. ಇಂಜಿನಿಯರ್‌ ವಿದ್ಯಾಭ್ಯಾಸ ಮಾಡಿದ್ದಾರೆ. ಬಿಗ್‌ ಮನೆಗೆ ಎಂಟ್ರಿ ಪಡೆದ ಐದನೇ ಸ್ವರ್ಧಿ.

ಧರ್ಮ ಕೀರ್ತಿರಾಜ್‌ (ಮನೆ – ಸ್ವರ್ಗ) : ಹಿರಿಯ ನಟ ಕೀರ್ತಿರಾಜ್‌ ಅವರ ಪುತ್ರ. ನವಗ್ರಹ ಸಿನಿಮಾದಲ್ಲಿ ಕ್ಯಾಡ್ಬರೀಸ್‌ ಎನ್ನುವ ಹೆಸರಿನಿಂದಲೇ ಫೇಮಸ್‌ ಆದವರು. ಸ್ವತಃ ನಾಯಕರಾಗಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಲಾಯರ್​ ಜಗದೀಶ್​ (ಮನೆ – ಸ್ವರ್ಗ) : ಲಾಯರ್ ಜಗದೀಶ್ ಅವರು ಅಚ್ಚರಿ ರೀತಿಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಿವಾದಾತ್ಮಕ ಹೇಳಿಕೆಗಳ ಮೂಲಕ ಜಗದೀಶ್ ಹೆಚ್ಚಾಗಿ ವಿವಾದಕ್ಕೆ ಗುರಿಯಾಗುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವಕೀಲ್ ಸಾಬ್ ಅಂತಲೇ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ವಿಡಿಯೋಗಳು ಸಖತ್ ವೈರಲ್ ಆಗುತ್ತವೆ ಕೂಡ. ಸದ್ಯ ‘ಬಿಗ್ ಬಾಸ್‌’ ಮನೆಗೆ 7ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ.

ಶಿಶಿರ್‌ ಶಾಸ್ತ್ರಿ (ಮನೆ – ನರಕ) : ಕುಲವಧು ಸೀರಿಯಲ್‌ನಲ್ಲಿ ನಟಿಸಿದ್ದ ನಟ ಶಿಶಿರ್‌ ಶಾಸ್ತ್ರಿ. ಉತ್ತಮ ಡಾನ್ಸರ್‌. ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ 8ನೇ ಸ್ಪರ್ಧಿ. ಬಿಗ್ ಬಾಸ್‌ ಗೆಲ್ಲುವ ನಿಟ್ಟಿನಲ್ಲಿ ಪ್ರಬಲ ವ್ಯಕ್ತಿ.

ತ್ರಿವಿಕ್ರಮ್‌ (ಮನೆ – ಸ್ವರ್ಗ) : ಪದ್ಮಾವತಿ ಸೀರಿಯಲ್‌ ಮೂಲಕ ಮನೆಮಾತಾಗಿದ್ದ ತಿವ್ರಿಕಮ್‌, ಮೂಲತಃ ಕ್ರಿಕೆಟಿಗ ಕೂಡ ಹೌದು. ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ 9ನೇ ಸ್ಪರ್ಧಿ.

ಹಂಸಾ ನಾರಾಯಣಸ್ವಾಮಿ (ಮನೆ – ಸ್ವರ್ಗ) : ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ರಾಜಿ ಪಾತ್ರದಿಂದಾಗಿ ಮನೆಮಾತಾಗಿತುವ ಹಿರಿಯ ನಟಿ. ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ 10ನೇ ಸ್ಪರ್ಧಿ. ಡ್ರಾಮಾ ಸಿನಿಮಾದ ಬೆಣ್ಣೆ ಶಾಂತಮ್ಮ ಪಾತ್ರದಿಂದಲೂ ಫೇಮಸ್‌.

ಮಾನಸಾ ಸಂತೋಷ್‌ (ಮನೆ – ನರಕ) : ಕಳೆದ ಆವೃತ್ತಿಯ ಬಿಗ್‌ ಬಾಸ್‌ನಲ್ಲಿದ್ದ ತುಕಾಲಿ ಸಂತೋಷ್‌ ಪತ್ನಿ. ಗಿಚ್ಚಿ ಗಿಲಿ ಗಿಲಿ ಶೋನಿಂದ ಹೆಸರು ಮಾಡಿಕೊಂಡಿದ್ದಾರೆ. ಬಿಗ್‌ ಬಾಸ್‌ ಮನೆಗೆ 11ನೇ ಎಂಟ್ರಿಯಾಗಿ ಬಂದ ಈಕೆ ಹೋಗಿದ್ದು ನೇರವಾಗಿ ನರಕಕ್ಕೆ.

ಗೋಲ್ಡ್‌ ಸುರೇಶ್‌ (ಮನೆ – ನರಕ) : ಕಳೆದ ಆವೃತ್ತಿಯಲ್ಲಿದ್ದ ವರ್ತೂರ್‌ ಸಂತೋಷ್‌ ಪಾತ್ರದಂತೆ ಗೋಲ್ಡ್‌ ಸುರೇಶ್‌ ಪಾತ್ರವೂ ಕಂಡಿದೆ. ಉತ್ತರ ಕರ್ನಾಟಕ ಮೂಲ. ಮೈತುಂಬಾ ಚಿನ್ನ ಹಾಕಿಕೊಂಡೇ ಬಿಗ್‌ ಬಾಸ್‌ ಮನೆಯ 12ನ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ.

ಐಶ್ವರ್ಯಾ (ಮನೆ – ಸ್ವರ್ಗ) : 2 ಸೀರಿಯಲ್‌ಗಳನ್ನು ಅರ್ಧಕ್ಕೆ ತೊರೆದು ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ತಂದೆ-ತಾಯಿ ಯಾರೂ ಇಲ್ಲ ಅನ್ನೋದನ್ನ ವೇದಿಕೆಯಲ್ಲಿಯೇ ತಿಳಿಸುವ ಮೂಲಕ ಸೆಂಟಿಮೆಂಟ್‌ ಕಾರ್ಡ್‌ ಕೂಡ ಪ್ಲೇ ಆಗಿದೆ. ಬಿಗ್‌ ಬಾಸ್‌ ಮನೆಗೆ 13ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು.

ಚೈತ್ರಾ ಕುಂದಾಪುರ (ಮನೆ – ನರಕ) : ದಾಖಲೆಯ ಪ್ರಮಾಣದಲ್ಲಿ ಮತ ಮಾಡಿ ಜನರು ಚೈತ್ರಾ ಕುಂದಾಪುರ ಅವರನ್ನು ಬಿಗ್‌ ಬಾಸ್‌ ಮನೆಯ ನರಕಕ್ಕೆ ಕಳಿಸಿದ್ಆರೆ. ಫೈರ್‌ ಬ್ರ್ಯಾಂಡ್‌ ನಾಯಕಿ, ವಿವಾದಿತ ವ್ಯಕ್ತಿತ್ವ. ಪಟಪಟನೆ ಮಾತನಾಡುವಂಥ ಹುಡುಗಿ. 14ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ.

ಉಗ್ರಂ ಮಂಜು (ಮನೆ – ಸ್ವರ್ಗ) :  ಫ್ರೆಂಡ್ಸ್‌ ಗ್ರೂಪ್‌ನಲ್ಲಿ ‘ಎಣ್ಣೆ’ ಮಂಜಣ್ಣ ಎಂದೇ ಫೇಮಸ್‌ ಆಗಿರುವ ಮಂಜು, ಉಗ್ರಂ ಸಿನಿಮಾದಲ್ಲಿನ ತಮ್ಮ ಪಾತ್ರದ ಮೂಲಕ ಮಿಂಚಿದವರು. ಸುದೀಪ್‌ ಅವರ ಮ್ಯಾಕ್ಸ್‌ ಸಿನಿಮಾದಲ್ಲಿಯೂ ದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಬಿಗ್‌ ಬಾಸ್‌ ಮನೆಯ 15ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ.

ಮೋಕ್ವಿತಾ ಪೈ (ಮನೆ – ನರಕ) : ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಪಾರು ಸೀರಿಯಲ್‌ ಮೂಲಕ ಮನೆಮಾತಾಗಿರುವ ತಾರೆ. ಬಿಗ್‌ ಬಾಸ್‌ ಮನೆಯ 16ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು.

ರಂಜಿತ್‌ (ಮನೆ – ನರಕ) ಶನಿ ಸೀರಿಯಲ್‌ನಲ್ಲಿನ ಪಾತ್ರದ ಮೂಲಕ ಮನೆಮಾತಾಗಿರುವ ವ್ಯಕ್ತಿ ರಂಜಿತ್‌. ಕಳೆದ ಬಾರಿ ಇದ್ದ ವಿನಯ್‌ ಗೌಡ ಥರ ಕ್ಯಾರೆಕ್ಟರ್‌. ಬಿಗ್‌ ಬಾಸ್‌ ಮನೆಯ ಕೊನೆಯ ಹಾಗೂ 17ನ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಹೊಸ ಅಧ್ಯಾಯ.. ಬಿಗ್ ಬಾಸ್ 11ಕ್ಕೆ ಸಿಕ್ತು ಅದ್ದೂರಿ ಚಾಲನೆ – ಇವರೇ ನೋಡಿ ದೊಡ್ಮನೆಯ ಘಟಾನುಘಟಿ ಸ್ಪರ್ಧಿಗಳು..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here