ತುಮಕೂರು : ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ್ದ ಪ್ರಕರಣದಿಂದ ಡ್ರೋನ್ ಪ್ರತಾಪ್ಗೆ ಇದೀಗ ದೊಡ್ಡ ಸಂಕಷ್ಟವೇ ಎದುರಾಗಿದೆ.
ಸೋಡಿಯಂ ಸ್ಪೋಟ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅವರ ಮೂರು ದಿನದ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯವಾದ ಹಿನ್ನೆಲೆ, ಬೆಳಗ್ಗೆ ಅವರನ್ನು ಮಧುಗಿರಿ ಜೆಎಂಎಫ್ಸಿ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಡಿಸೆಂಬರ್ 26ರವರೆಗೆ ಡ್ರೋನ್ ಪ್ರತಾಪ್ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಇನ್ನು ಕಳೆದ ಮೂರು ದಿನಗಳಿಂದ ಡ್ರೋನ್ ಪ್ರತಾಪ್ನನ್ನು ಮಿಡಿಗೇಶಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, (ಭಾನುವಾರ) ನಿನ್ನೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಡ್ರೋನ್ ಪ್ರತಾಪ್ ಮನೆ ಕಚೇರಿ ಹಾಗೂ ಸೋಡಿಯಂ ಖರೀದಿಸಿದ್ದ ಅಂಗಡಿಯಲ್ಲಿ ಮಹಜರ್ ಮಾಡಿದ್ದಾರೆ. ಜೊತೆಗೆ ವಿಡಿಯೋ ಚಿತ್ರಿಕರಿಸಿದ್ದ ಕ್ಯಾಮರಾಮನ್ ವಿನಯ್ ಹಾಗೂ ಸೋಡಿಯಂ ಖರೀದಿಗೆ ಸಹಕಾರ ನೀಡಿದ್ದ ಪ್ರಜ್ವಲ್ನನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸಾಯಿ ದುರ್ಗಾ ತೇಜ್ ನಟನೆಯ “ಸಂಬರಾಲ ಏಟಿಗಟ್ಟು” ಚಿತ್ರದ ಟೀಸರ್ ರಿಲೀಸ್..!